ಜಿಲ್ಲೆ

ಸಂಟಿತರಾದರೆ ಸರ್ಕಾರವೇ ನಮ್ಮ ಬಳಿ ಬರುತ್ತದೆ: ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ

ಚಿಕ್ಕನಾಯಕನಹಳ್ಳಿ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ನಾವೆಲ್ಲರೂ ಸಂಟಿತರಾದರೆ ಸರ್ಕಾರವೇ ನಮ್ಮ ಬಳಿ ಬರುತ್ತದೆ ಎಂದು ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಗೋಡೆಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ನೊಳಂಬ ಸ್ವಯಂ ಸೇವಾ ಸಂದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೊಳಂಬ ಸಮುದಾಯ 9 ಎಂಎಲ್​ಎಗಳನ್ನು ಗೆಲ್ಲಿಸಿಕೊಳ್ಳಬಹುದು. ನಾವು ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಪ್ರಬಲರಾದರೆ ವಿಧಾನಸೌಧಕ್ಕೆ ನಮ್ಮ ಹಕ್ಕು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.

ಕೆರೆಗೋಡಿ ರಂಗಾಪುರ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಇತರ ಕೋಮುಗಳು ತಮ್ಮ ಹಕ್ಕು ಪಡೆಯಲು ಹೋರಾಟದ ಹಾದಿ ಹಿಡಿದಿವೆ. ಒಳ್ಳೆಯ ನಡೆ ನುಡಿಯಿಂದ ನಮ್ಮ ಸಮಾಜ ಬೆಳೆದಿದ್ದು, ಇತರ ಸಂಗಳು ಏನೇ ಮಾಡಿದರೂ ನಾವು ಮಾನವೀಯತೆ ಹಾಗೂ ಗುರು ಸಿದ್ದರಾಮೇಶ್ವರರ ವಿಚಾರಗಳೊಂದಿಗೆ ಅಹಿಂಸಾತ್ಮಕವಾಗಿ ಹಕ್ಕು ಪಡೆದುಕೊಳ್ಳಬೇಕು ಎಂದರು.

ನವ ಕಲ್ಯಾಣ ಮಠದ ಮಹಿಳಾ ಪೀಠಾಧ್ಯೆ ಮಾತೆ ಬಸವಾಂಜಲಿ ತಾಯಿ ಮಾತನಾಡಿ, ನೊಳಂಬರು ಕ್ಷತ್ರಿಯರಾಗಿದ್ದು, ರಾಜ್ಯದಲ್ಲಿ ಆಳ್ವಿಕೆ ನಡೆಸಿದ್ದಾರೆ. ನಮ್ಮದು ಶೂನ್ಯ ಪೀಠವೆಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದರು.

ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜ್ಞಾನವಿದ್ದವನು ದೊಡ್ಡವನು, ಹಣವಿದ್ದವನಲ್ಲ. ಭಕ್ತರೊಂದಿಗೆ ಶ್ರೀಗಳು ತಾರತಮ್ಯವಾಗಿ ನಡೆದುಕೊಂಡರೆ ನಮ್ಮನ್ನೂ ಭಕ್ತರು ಪ್ರಶ್ನಿಸುವ ಕಾಲ ಬರುತ್ತದೆ. ಸಮಾಜದ ಕೆಲಸವಿದ್ದಾಗ ಕೊನೆಯವರೆಗೂ ಇದ್ದು ಮಾರ್ಗದರ್ಶನ ಮಾಡುವುದು ಗುರುಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಸಿದ್ದಲಿಂಗೇಶ್ವರ ಸಂಸ್ಥಾನದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿವಿಧ ಸಂಗಳ ನೆರವಿನಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ರಾಜ್ಯ ಸಂಚಾಲಕ ಉಮೇಶ್​ ಪಣಕಾರ್​, ಕಾರ್ಯನಿರತ ಪತ್ರಕರ್ತರ ಸಂದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎಸ್​ಬಿಐ ಅಧಿಕಾರಿ ಜ್ಯೋತಿಗಣೇಶ್​, ಜಿಲ್ಲಾ ಸಂಚಾಲಕ ಮೆಡಿಕಲ್​ ಬಸವರಾಜ್​, ತರಬೇನಹಳ್ಳಿ ಷಡಕ್ಷರಿ ಇದ್ದರು.

ಸಮಾಜಕ್ಕೆ ಮಠಗಳು ದಿಕ್ಸೂಚಿ: ಸಮಾಜಕ್ಕೆ ಮಠಗಳು ದಿಕ್ಸೂಚಿಯಾಗಿ ಕೆಲಸ ಮಾಡುತ್ತಿದ್ದು, ಮಠ ಮತ್ತು ಸಮಾಜ ಹೊಂದಿಕೊಂಡು ಹೋಗಬೇಕಿದೆ ಎಂದು ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಮಾಜ ಮುನ್ನಡೆಸುವಲ್ಲಿ ಮಠಗಳ ಪಾತ್ರ ಬಹುಮುಖ್ಯವಾಗಿದ್ದು, ಕಾಯಕವೇ ಕೈಲಾಸ ತತ್ವವನ್ನು ಅಳವಡಿಸಿಕೊಂಡಲ್ಲಿ ಸಮ ಸಮಾಜದ ಉದ್ದೇಶ ಸಫಲವಾಗುತ್ತದೆ. ಸರಿಯಾದ ಸಮಯಕ್ಕೆ ನಾವೆಲ್ಲಾ ಶ್ರೀಗಳು ಆಗಮಿಸಿದ್ದರೂ ಭಕ್ತರೇ ಬಂದಿರುವುದಿಲ್ಲ. ಯುವಕರಿಗೆ ನಮ್ಮ ಸ್ವಾಮಿಗಳು ಯಾರು ಎಂದು ತಿಳಿದಿರುವುದಿಲ್ಲ, ಇಂತಹ ಸಂದರ್ಭಗಳನ್ನು ಭಕ್ತರು ಬಳಸಿಕೊಂಡು ಆಶೀರ್ವಚನ ಪಡೆಯಬೇಕು ಎಂದರು.

ದುಡ್ಡು ಸಂಗ್ರಹಿಸುವ ಕೆಲಸ ಬಿಟ್ಟು ಸಮಾಜಕ್ಕೆ ಕೊಡುಗೆ ನೀಡಿ. ಮೃತ್ಯುಂಜಯ ಶ್ರೀಗಳು ನೊಳಂಬ ಸಂಟನೆ ಕಟ್ಟುವ ಜವಾಬ್ದಾರಿ ಪಡೆದು ಇದರಲ್ಲಿ ಯಶಸ್ವಿಯಾಗುತ್ತಾರೆ. ಅವರು ಸಿದ್ದರಾಮೇಶ್ವರರಂತೆ ಕಾಯಕ ಯೋಗಿಗಳು. > ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಶಿಡ್ಲೇಹಳ್ಳಿ ಧಾರುಕ ಸಂಸ್ಥಾನ ಒಳ್ಳೆಯ ನುಡಿಗಳು ಮನಸ್ಸಿಗೆ ಹಿತ ನೀಡುತ್ತವೆ. ಶ್ರೀಗಳು ಇರುವ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಾಗ ಧರ್ಮಗ್ರಂಥ ಓದಿದಷ್ಟು ಜ್ಞಾನ ದೊರೆಯುತ್ತದೆ. ಅಂಗವೆಂದರೆ ಅಜ್ಞಾನ ಲಿಂಗವೆಂದರೆ ಸುಜ್ಞಾನ. > ಶ್ರೀಚಂದ್ರಶೇಖರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠ