ಎನ್.ಆರ್.ಪುರ ತಾಲೂಕಿನ ಬನ್ನೂರು ಸಂಜೀವಿನಿ ಗ್ರಾಪಂ ಮಟ್ಟದ ವಾರ್ಷಿಕ ಮಹಾ ಸಭೆಯನ್ನು ಅಧ್ಯಕ್ಷೆ ರೋಹಿಣಿ ಉದ್ಘಾಟಿಸಿದರು. ರಾಘವೇಂದ್ರ, ಕೌಶಲಾ, ಗಿರೀಶ್, ವಿನುತಾ, ಶೈನಿ ಇತರರಿದ್ದರು. 
ಜಿಲ್ಲೆ

ಸಂಜೀವಿನಿ ಒಕ್ಕೂಟದ ಸೌಲಭ್ಯ ಪಡೆಯಿರಿ

ಎನ್.ಆರ್.ಪುರ: ಸಂಜೀವಿನಿ ಒಕ್ಕೂಟ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮ ರೂಪಿಸಲಿದೆ ಎಂದು ಎನ್‌ಆರ್‌ಎಲ್‌ಎಂ ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ ತಿಳಿಸಿದರು.

ಬನ್ನೂರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಮಹಿಳೆಯರು ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಬೇಕು. ಒಕ್ಕೂಟದ ಸಭೆಗಳಲ್ಲಿ ಸದಸ್ಯರು ಭಾಗವಹಿಸಿ ಮಾಹಿತಿ ಪಡೆಯಬೇಕು. ಪ್ರತಿ ವರ್ಷ ಆರ್ಥಿಕ ವರ್ಷದ ಆಂತರಿಕ ಮತ್ತು ಶಾಸನಬದ್ಧ ಲೆಕ್ಕ ಪರಿಶೋಧನೆ ಮಾಡಿಸಿ ಮಹಾ ಸಭೆ ನಡೆಸಬೇಕು. ಸಭೆಯಲ್ಲಿ ಒಕ್ಕೂಟದ ವಾರ್ಷಿಕ ಆದಾಯ, ವೆಚ್ಚಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಪಡೆಬಹುದು. ಸಂಘದ ಸದಸ್ಯರು ಗ್ರಾಮ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಗ್ರಾಪಂನಿಂದ ಸಿಗುವ ಸೌಲಭ್ಯ ಪಡೆಯಬಹುದು ಎಂದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಹಿಣಿ ಮಾತನಾಡಿ, ಒಕ್ಕೂಟದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದಸ್ಯರು ಉಪಯೋಗಿಸಿಕೊಳ್ಳಬೇಕು. ಬನ್ನೂರು ಒಕ್ಕೂಟವನ್ನು ತಾಲೂಕಿನಲ್ಲಿ ಮಾದರಿಯನ್ನಾಗಿ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಪಿಡಿಒ ರಾಘವೇಂದ್ರ ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಎಲ್ಲ ಗ್ರಾಮಸಭೆಗಳಲ್ಲಿ ಭಾಗವಹಿಸಬೇಕು. ವಿಶೇಷ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದರು. ಖಜಾಂಚಿ ಸುಪರ್ಣ, ಕಾಯದರ್ಶಿ ಕೌಶಲಾ, ಉಪಾಧ್ಯಕ್ಷೆ ಮಮತಾ, ಗಿರೀಶ್, ವಿನುತಾ, ಶೈನಿ, ಸ್ವರ್ಣಾ, ಪೂರ್ಣಿಮಾ, ಜಾನಕಿ, ವೀಣಾ, ನೇತ್ರಾವತಿ ಇದ್ದರು.