ಜಿಲ್ಲೆ

ಸಂಚಾರಕ್ಕೆ ಅಡ್ಡಿಯಾದ ಬಿಡಾಡಿ ದನಗಳು

ಹರೀಶ ಕುಲಕರ್ಣಿ

ಕೊಡೇಕಲ್: ಗ್ರಾಮದಲ್ಲಿ ಕಳೆದ ಒಂದು ತಿಂಗಳಿAದ ಸಂAಜೆಯಾಗುತ್ತಲೇ ಬಿಡಾಡಿ ದನಗಳು ರಸ್ತೆ ಮೇಲೆ ವಿಶ್ರಮಿಸುತ್ತಿರುವ ಕಾರಣ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.

ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ತಿಂಗಳಿನಿAದ ಕೋಣ ಮತ್ತು ಎಮ್ಮೆಗಳ ಹಿಂಡು ನಿತ್ಯ ಸಂಜೆಯಾಗುತ್ತಿದ್ದAತೆ ರಸ್ತೆ ಮಧ್ಯದಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಎಷ್ಟೇ ಧ್ವನಿ ಮಾಡಿದರು ಸುತಾರಂ ಕಿಂಚಿತ್ತು ಕದಲದೆ ನಿದ್ದೆ ಮಾಡುತ್ತಿವೆ. ಅವುಗಳನ್ನು ಎಬ್ಬಿಸಲು ಹೋದರೆ ಹಾಯಲು ಬರುವಂತೆ ಭಯ ಹುಟ್ಟಿಸುತ್ತಿವು ಘಟನೆ ನಡೆದಿವೆ.

ಯಾಯತ್ತು ಇರದ ಈ ಸಮಸ್ಯೆ ಕಳೆದ ಒಂದು ತಿಂಗಳಿನಿAದ ಕಾಣಿಸಿಕೊಂಡಿದ್ದು ಸಂಜೆ ವೇಳೆ ಗ್ರಾಮದ ಮೂಲಕ ಸಂಚಾರ ಮಾಡುವ ಸರ್ಕಾರಿ ಹಾಗೂ ಖಾಸಗಿ ಬಸ್ ಸೇರಿ ಇತರೆ ವಾಹನಗಳಿಗೆ ಇನ್ನಿಲ್ಲದಂತೆ ಕಾಡುತ್ತಿವೆ. ಅಲ್ಲದೆ ಪಾದಚಾರಿಗಳು ಸಹ ಸಂಚಾರ ಮಾಡಲು ಕೂಡ ಭಯಪಡುವಂತಾಗಿದೆ.

ರಾಜ್ಯ ಹೆದ್ದಾರಿಯಲ್ಲಿ ಮಲಗುತ್ತಿರುವ ಈ ಜಾನುವಾರುಗಳು ಕತ್ತಲು ಆವರಿಸುತ್ತಿದ್ದಂತೆ ಕಣ್ಣಿಗೆ ಕಾಣಿಸದಂತಾಗುತ್ತದೆ. ವಾಹನಗಳ ಚಾಲಕರು ಭೀತಿಯಲ್ಲಿ ವಾಹನ ಚಲಾಯಿಸುವಂತಾಗಿದೆ. ಸಂಜೆ ಹಾಗೂ ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೂ ಕೂಡಾ ರಾಜಾರೋಷವಾಗಿ ಹೆದ್ದಾರಿ ಮಧ್ಯಭಾಗದಲ್ಲಿ ಬಂದು ಮಲಗುವ ಎಮ್ಮೆಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿ ಇವುಗಳ ನಿಯಂತ್ರಣ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.