ಜಿಲ್ಲೆ

ಸಂಚಾರಕ್ಕೆ ಅಡಚಣೆಯಾಗಿದ್ದ ಕಟ್ಟಡ ತೆರವು

ಚಿತ್ರದುರ್ಗ: ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಗಾಂಧಿ ವೃತ್ತದಿಂದ 50 ಮೀಟರ್ ಸಮೀಪದ ಕಟ್ಟಡವೊಂದರ ಮೂರು ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಭಾನುವಾರ ಜೆಸಿಬಿ ಯಂತ್ರದ ಸಹಕಾರದಿಂದ ತೆರವು ಕಾರ್ಯಾಚರಣೆ ಕೈಗೊಂಡರು.

ಇದೇ ವೇಳೆ ಅಕ್ಕ-ಪಕ್ಕದ ಮಳಿಗೆಗಳ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಾಚರಣೆಯಿಂದ ನಮ್ಮ ಕಟ್ಟಡಗಳಿಗೆ ತೊಂದರೆಯಾಗಲಿದೆ ಎಂದು ವಾಗ್ವಾದಕ್ಕೆ ಇಳಿದರು.

ನ್ಯಾಯಾಲಯದ ಅನುಮತಿ ಪಡೆದೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದನ್ನು ಯಾರೂ ಅಡ್ಡಿಪಡಿಸುವಂತಿಲ್ಲ ಎಂದರೂ ಕೆಲವರು ಸಮಾಧಾನಗೊಳ್ಳಲಿಲ್ಲ. ಮಾತಿನ ಚಕಮಕಿ ಮುಂದುವರಿಯಿತು.

ಕೊನೆಗೆ ಪೊಲೀಸರ ಸಹಕಾರ ಪಡೆದು ಮಳಿಗೆ ಕಾರ್ಯಾಚರಣೆ ನಡೆಸಲಾಯಿತು. ಇದೇ ವೇಳೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.