ಮದ್ದೂರು: ರೋಟರಿ ಸಂಸ್ಥೆ ವತಿಯಿಂದ ಪಟ್ಟಣದ ಸಂಚಾರ ಪೊಲೀಸ್ ಠಾಣೆ ಸಹಯೋಗದೊಂದಿಗೆ ತಾಲೂಕಿನ ಚಿಕ್ಕಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸಂಚಾರ ನಿಯಮಗಳು ಹಾಗೂ ಕಾನೂನಿನ ಬಗ್ಗೆ ಸಂಚಾರ ಆರಕ್ಷಕ ಉಪ ನಿರೀಕ್ಷಕ ಅಯ್ಯನಗೌಡ ಅವರಿಂದ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಯ್ಯನಗೌಡ ಮಾತನಾಡಿ, ಪ್ರತಿಯೊಬ್ಬರೂ ಸಂಚಾರ ನಿಯಂತ್ರಣ ಬಗ್ಗೆ ತಿಳಿದುಕೊಂಡರೆ ಅಪಘಾತಗಳು ಕಡಿಮೆಯಾಗಿ ಸಾವು-ನೋವುಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲೇ ಸಂಚಾರ ನಿಯಂತ್ರಣ ಬಗ್ಗೆ ತಿಳಿದುಕೊಂಡು ಆ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಶಶಿಗೌಡ , ಕಾರ್ಯದರ್ಶಿ ಎಚ್.ಪಿ.ಚನ್ನಂಕೇಗೌಡ, ಮಾಜಿ ಅಧ್ಯಕ್ಷರಾದ ಬಿ.ಎನ್. ಬಸವರಾಜು, ಸದಸ್ಯರಾದ ಎ.ಲೋಕೇಶ್, ಎನ್.ಮಂಜುನಾಥ ನಾಯ್ಡು, ಮುಖ್ಯಶಿಕ್ಷಕ ಆನಂದ್ ಇದ್ದರು.