ಕಲಬುರಗಿ: ನಗರದಲ್ಲಿ ದಿನೇದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಭಾನುವಾರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಢಗೆ ಮಿಂಚಿನ ಸಂಚಾರ ನಡೆಸಿ ಅಧಿಕಾರಿಗಳು, ಸ್ಥಳೀಯರು ಹಾಗೂ ವಾಹನ ಸವಾರರಿಂದ ಮಾಹಿತಿ ಪಡೆದರು.
ಎಡಗಡೆ ಸಂಚಾರಮುಕ್ತ, ವಾಹನ ನಿಲುಗಡೆ, ಆಟೋ ಸ್ಟಾÈಂಡ್ ರಚನೆ, ಆಟೋದವರ ನಿಯಂತ್ರಣ ಸೇರಿ ವಿವಿಧ ಮಾಹಿತಿ ಪಡೆದರು. ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರೊಂದಿಗೆ ರ‍್ಚಿಸಿ ಸಮಸ್ಯೆ ಆಲಿಸಿ ಸೂಕ್ತ ರೀತಿಯಲ್ಲಿ ವಾಹನ ನಿಲುಗಡೆ ಮಾಡಬೇಕು. ಪ್ರಯಾಣಿಕರೊಂದಿಗೆ ಉತ್ತಮವಾಗಿ ರ‍್ತಿಸಬೇಕು ಎಂದು ಸೂಚಿಸಿದರು.
ರಾಷ್ಟçಪತಿ ವೃತ್ತ (ಜೇರ‍್ಗಿ ಕ್ರಾಸ್), ರ‍್ಚಿಡ್ ಮಾಲ್, ಲಾಹೋಟಿ ವೃತ್ತ, ಜಿಲ್ಲಾ ನ್ಯಾಯಾಲಯ, ರ‍್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ರೈಲ್ವೆ ಸ್ಟೇಷನ್, ಮೋಹನ್ ವೃತ್ತ, ಬಸ್ ನಿಲ್ದಾಣ, ಕಣ್ಣಿ ಮಾರುಕಟ್ಟೆ, ಹೈಕರ‍್ಟ್ ವೃತ್ತ, ಹೈಕರ‍್ಟ್, ಉದನೂರ ವೃತ್ತ, ರಾಮಮಂದಿರ ವೃತ್ತ, ಶಹಾಬಾದ್ ವೃತ್ತ, ಸೇಡಂ ವೃತ್ತ ಸೇರಿ ಎಲ್ಲೆಡೆ ಸಂಚಾರ ನಡೆಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದರು.
ಹೀರಾಪುರ ಕ್ರಾಸ್‌ನಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳನ್ನು ಮುಖ್ಯ ರಸ್ತೆಯಲ್ಲಿರುವ ಕಣ್ಣಿ ಮಾರುಕಟ್ಟೆ ಒಳಮರ‍್ಗದಲ್ಲಿ ತಿರುವು ನೀಡಿ ನೇರವಾಗಿ ನಿಲ್ದಾಣಕ್ಕೆ ಬರುವಂತೆ ಮಾಡುವ ಸಾಧ್ಯತೆಗಳ ಕುರಿತು ರ‍್ಚಿಸಿದರು.
ಸಂಚಾರ ದಟ್ಟಣೆಯ ಗಂಭೀರತೆ ಅರಿಯಲು ಇಡೀ ಬಸ್ ನಿಲ್ದಾಣದ ಸುತ್ತು ಹಾಕಿದ ಡಾ.ಶರಣಪ್ಪ ಢಗೆ, ಆಟೋ ಮರ‍್ಗ ಬದಲಾವಣೆಯ ಹೊಸ ನಿಲ್ದಾಣವನ್ನು ವೀಕ್ಷಿಸಿದರು. ಬೈಪಾಸ್ ಮರ‍್ಗ ಬಿಟ್ಟು ನಗರ ಮಧ್ಯದಿಂದ ಕೇಂದ್ರ ನಿಲ್ದಾಣಕ್ಕೆ ಬಸ್‌ಗಳು ಬರುವ ಕುರಿತು ರ‍್ಚಿಸಿ ಮೂರು ದಿನ ಕಾಲಾವಕಾಶ ನೀಡಲಾಗುವುದು. ನಂತರವೂ ಬಂದರೆ ಚಾಲಕರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಹೈಕರ‍್ಟ್ ಆವರಣಕ್ಕೆ ಭೇಟಿ ನೀಡಿ ಭದ್ರತೆ, ವಾಹನ ಸಂಚಾರ, ಅಪರಾಧ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಡಿಸಿಪಿ ಪ್ರವೀಣ ನಾಯಕ್, ಎಸಿಪಿ ಇಸ್ಮಾಯಿಲ್, ಸಂಚಾರ-೨ ಠಾಣೆ ಸಿಪಿಐ ಖಾಜಾ ಹುಸೇನ್, ಅಶೋಕ ನಗರ ಠಾಣೆ ಸಿಪಿಐ ಅರುಣಕುಮಾರ, ವಿವಿ ಠಾಣೆ ಸಿಪಿಐ ಸುಶೀಲಕುಮಾರ ಇತರರಿದ್ದರು.