ಜಿಲ್ಲೆ

ಸಂಚನಾ ಕೋಶಗೆ ಸಚಿವರಿಂದ ಸನ್ಮಾನ

ಕಾರವಾರ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಕಾರವಾರದ ಸಂಚನಾ ಕೋಶ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಶಾಸಕಿ ರೂಪಾಲಿ ನಾಯ್ಕ ತೆರಳಿ ಸನ್ಮಾನಿಸಿದರು.

ಸಂಚನಾ ಅಂಗವಿಕಲೆಯಾಗಿದ್ದಾರೆ. ಇಲ್ಲಿನ ಬಾಡ ಬಾಲಭವನ ಶಾಲೆಯಲ್ಲಿ ಓದಿದ ಆಕೆ 622 ಅಂಕ ಗಳಿಸಿದ್ದಾರೆ. ತಂದೆ ಅರುಣ ಕೋಶ ಕೊಂಕಣ ರೈಲ್ವೆ ಉದ್ಯೋಗಿ.

ವಿಶೇಷ ಎಂದರೆ ಮಲೆಯಾಳಿ ಮಾತನ್ನಾಡುವ ಕೇರಳ ಮೂಲದ ಸಂಚನಾ ದ್ವಿತೀಯ ಭಾಷೆ ಕನ್ನಡದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ. ಹಿಂದಿ ಹಾಗೂ ವಿಜ್ಞಾನಕ್ಕೂ ಶೇ. 100 ಅಂಕ ಗಳಿಸಿದ್ದಾರೆ.