ಬಾಗಲಕೋಟೆ: ಬಿವಿವಿ ಸಂಘದ ೧೧೯ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಿನ್ನಲೆಯಲ್ಲಿ ಅ.೧೮ ರಂದು ಪೂರ್ಣಗೊಂಡಿರುವ ಫಿಜಿಯೋಥೆರಪಿ ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜುಗಳ ಕಟ್ಟಡಗಳ ಉದ್ಘಾಟನಾ ಸಮಾರಂಭ ಬೆಳಗ್ಗೆ ೧೦.೩೦ಕ್ಕೆ ಮೆಡಿಕಲ್ ಕಾಲೇಜಿನ ಶತಾಬ್ಧಿ ಭವನದಲ್ಲಿ ನಡೆಯಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ಸಂಘದ ಮಿನಿ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳದ ಶ್ರೀ.ಮ.ನಿ.ಪ್ರ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಭಾರತ ಸರ್ಕಾರ ನವದೆಹಲಿಯ ಎಚ್.ಆರ್, ಸಾಮರ್ಥ್ಯ ನಿರ್ಮಾಣ ಆಯೋಗ ಸದಸ್ಯರಾದ ಡಾ.ಆರ್ ಬಾಲಸುಬ್ರಮಣ್ಯಂ ಕಟ್ಟಡ ಉದ್ಘಾಟಿಸುವರು. ಸಮಾರಂಭದಲ್ಲಿ ಸಂಘದ ಎಲ್ಲ ೧೭೫ ಸಂಸ್ಥೆಯಗಳ ಶಿಕ್ಷಕರು, ಪದಾಽಕಾರಿಗಳು, ಸಂಘದ ಸದಸ್ಯರು ಭಾಗವಹಿಸಲಿದ್ದಾರೆಂದರು.
ಜಿಲ್ಲೆಯಲ್ಲಿ ಫಿಜಿಯೋಥೆರಪಿ ಪರಿಣಿತ ವೈದ್ಯರ ಕೊರತೆಯ ನಿವಾರಣೆಗಾಗಿ ಬಿವಿವಿ ಸಂಘದಡಿ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ೨೦೧೯ ರಲ್ಲಿ ೪೦ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯೊಂದಿಗೆ ಫಿಜಿಯೋಥೆರಪಿ ಕಾಲೇಜನ್ನು ಆರಂಭಿಸಲಾಯಿತು. ಇದು ಜಿಲ್ಲೆಯಲ್ಲಿ ಸ್ಥಾಪನೆಯಾದ ಏಕೈಕ ಫಿಜಿಯೋಥೆರಪಿ ಕಾಲೇಜು. ಕಳೆದ ವರ್ಷದಿಂದ ದಾಖಲಾತಿ ೬೦ ಕ್ಕೆ ಹೆಚ್ಚಿಸಿ ವಿಶ್ವವಿದ್ಯಾಲಯದಿಂದ ಅನುಮತಿ ದೊರೆತಿದೆ. ಜೊತೆಗೆ ಆರು ವಿಷಯಗಳಲ್ಲಿ ಎಮ್‌ಪಿಟಿ (ಪಿ.ಜಿ) ಕೋರ್ಸ್ ಪ್ರಾರಂಭಗೊAಡಿದ್ದು, ಪ್ರತಿವರ್ಷ ೧೮ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಮೆಡಿಕಲ್ ಕಾಲೇಜು ಆವರಣದಲ್ಲಿ ೧೦ ಕೋಟಿ ರೂ. ವೆಚ್ವದಲ್ಲಿ ಕಾಲೇಜಿನ ಬೃಹತ್ ಕಟ್ಟಡ ನಿರ್ಮಿಸಲಾಗಿದ್ದು, ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಬಿವಿವಿ ಸಂಘದಿAದ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜನ್ನು ಆರಂಭಿಸಲಾಗುತ್ತಿದೆ. ರಾಜೀವಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಫಾರಸಿನನ್ವಯ ೪೦ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯೊಂದಿಗೆ ಕಾಲೇಜು ಆರಂಭಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಪುನರ್ವಸತಿ ಮಂಡಳಿ, ನವದೆಹಲಿ ಅವರ ಪರಿವೀಕ್ಷಣೆ ನಂತರ ಕಾಲೇಜು ಆರಂಭಗೊಳ್ಳಲಿದೆ. ೧೨ ಕೋಟಿ ರೂ.ಗಳ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣಗೊಂಡಿದೆ. ೨೦೨೬ ನೇ ಶೈಕ್ಷಣಿಕ ವರ್ಷದಿಂದ ಕಾಲೇಜು ಕಾರ್ಯಾರಂಭಿಸಲಿದೆ. ಈಗಾಗಲೇ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಆರು ವರ್ಷದೊಳಗಿನ ಮಕ್ಕಳ ಕಿವುಡುತನದ ಚಿಕಿತ್ಸೆಗಾಗಿ ಕಾಕ್ಲಿಯರ್ ಇಂಪ್ಲಾ÷್ಯAಟ್ ಅಳವಡಿಸಲು ಸರ್ಕಾರ ಕುಮಾರೇಶ್ವರ ಆಸ್ಪತ್ರೆಗೆ ತೃತೀಯ ಆರೈಕೆ ಕೇಂದ್ರವೆAದು ಮಾನ್ಯತೆ ನೀಡಿ ಅನುಮತಿ ನೀಡಿದೆ. ೫ ಲಕ್ಷ ರೂಪಾಯಿಗಳ ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಇದುವರೆಗೆ ೧೦ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾ÷್ಯAಟ್ ಅಳವಡಿಸಿ ಗುಣಮುಖಗೊಳಿಸಲಾಗಿದೆ ಎಂದು ತಿಳಿಸಿದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಇದ್ದರು.