ಹುಲಗಬಾಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು, ಅಮರೇಶ್ವರ ಮಹಾರಾಜರು, ಗುರುಸಿದ್ಧೇಶ್ವರ ಸ್ವಾಮೀಜಿ, ಮಾಯಪ್ಪ ಅಡಗಲಿ, ದೊಂಡಿಬಾ ದೊಯಿಪಡೆ, ವಿಠೋಬಾ ಯಾದವ ಇತರರಿದ್ದರು. 
ಜಿಲ್ಲೆ

ಸಂಘದ ಏಳಿಗೆಗೆ ಸದಸ್ಯರು ಶ್ರಮಿಸಲಿ

ಅಥಣಿ ಗ್ರಾಮೀಣ: ಸಂಘದ ಪದಾಕಾರಿಗಳು ಸ್ವಾರ್ಥಕ್ಕಾಗಿ ಅಕಾರ ಚಲಾಯಿಸದೆ ರೆತರ ಶ್ರೇಯೋಭಿವದ್ಧಿಗೆ ಹಾಗೂ ಸಂಘದ ಏಳಿಗೆಗಾಗಿ ಶ್ರಮಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಪ್ರಾರಂಭಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಪಿಕೆಪಿಎಸ್‌ಗಳಲ್ಲಿ ರಾಜಕೀಯ ಮಾಡದೆ ಪಾರದರ್ಶಕ ಆಡಳಿತ ನಡೆಸಿದರೆ, ಸಂಘಗಳು ಬೆಳೆಯುತ್ತವೆ. ಜೀವನದಲ್ಲಿ ಅಕಾರ, ಕುರ್ಚಿ ಶಾಶ್ವತವಲ್ಲ. ರೈತರು ನೀಡಿದ ಅಕಾರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ, ಸಂಘಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೀರಿ. ಹೆಸರಿಗೆ ಧಕ್ಕೆ
ಬರದ ಹಾಗೆ ಎಲ್ಲ ನಿರ್ದೇಶಕರು ಶಾಸಕ ಲಕ್ಷ್ಮಣ ಸವದಿ ಅವರ ಸಹಕಾರ ಪಡೆದು ಸರ್ಕಾರದಿಂದ ಹೆಚ್ಚಿನ ಸವಲತ್ತು ಪಡೆಯಿರಿ ಎಂದರು.

ಹಲ್ಯಾಳ ವಿರಕ್ತಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಬಾಳಪ್ಪ ಅಡಗಲಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಾಯಪ್ಪ ಅಡಗಲಿ, ದೊಂಡಿಬಾ ದೊಯಿಪಡೆ, ವಿಠೋಬಾ ಯಾದವ, ಅರುಣ ಪಾಟೀಲ, ಮಾರುತಿ ಉಸ್ಕಿ, ಗೌರೀಶ ಹಿರೇಮಠ, ಸಂತೋಷ ನಿವರಗಿ, ಸಾಂತಿನಾಥ ತೆರದಾಳ, ಮಹೇಶ ಸಾರವದಿ, ಕಾರ್ಯದರ್ಶಿ ರವೀಂದ್ರ ಪಾಟೀಲ ಇತರರು ಇದ್ದರು.