ಹುಬ್ಬಳ್ಳಿ: ಕರ್ಫ್ಯೂನಿಂದಾಗಿ ಸಂಕಷ್ಟಕ್ಕೀಡಾಗಿರುವ ಕೂಲಿ ಕಾರ್ವಿುಕರು, ಭಿಕ್ಷುಕರು, ಪರ ಊರಿನವರು ಹಾಗೂ ಕರ್ತವ್ಯ ನಿರತ ಪೊಲೀಸರಿಗೆ ವಿವಿಧ ಸಂಘಟನೆಗಳು ಆಹಾರ ಧಾನ್ಯ ಹಾಗೂ ಉಪಾಹಾರ ವಿತರಿಸಿದವು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲಾಯಿತು. ರಾಮನಗರ, ಯಲ್ಲಾಪುರ ಓಣಿ, ವೀರಾಪುರ ಓಣಿ, ಸಿಬಿಟಿ ಕಿಲ್ಲೆ, ಗಣೇಶಪೇಟೆ, ಅದರಗುಂಚಿ ಗ್ರಾಮ ಸೇರಿದಂತೆ ಇತರೆಡೆ 5 ಕೆಜಿ ಅಕ್ಕಿ, 1ಕೆಜಿ ತೊಗರಿಬೇಳೆ, 1 ಕೆಜಿ ರವಾ, 1 ಪ್ಯಾಕೆಟ್ ಎಣ್ಣೆ, ಅರಿಷಿಣಪುಡಿ, ಖಾರದ ಪುಡಿ, ಜೀರಿಗೆ, ಸಾಸಿವೆ ಇರುವ ಆಹಾರ ಸಾಮಗ್ರಿಗಳ ಪ್ಯಾಕೆಟ್ಗಳನ್ನು ವಿತರಿಸಲಾಯಿತು.
ಮಾಜಿ ಮೇಯರ್ ಸುಧೀರ ಸರಾಫ, ಮುಖಂಡರಾದ ಮಹೇಂದ್ರ ಕೌತಾಳ, ಅನೂಪ ಬಿಜವಾಡ, ಕ್ಷಮತಾ ಸಂಚಾಲಕ ಗೋವಿಂದ ಜೋಶಿ, ಮುರಲೀಧರ ಮಳಗಿ, ಸಚಿವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ಪಾಟೀಲ, ಚಂದ್ರಶೇಖರ ಬೆಳವಾಡಿ, ಮಹೇಶ ಚಿಕ್ಕವೀರ ಮಠ, ಗಿರೀಶ ಚಿಕ್ಕವೀರಮಠ, ರೋಹಿತ ಹುದ್ದಾರ, ರೂಪೇಶ ಕ್ಷೀರಸಾಗರ, ರುದ್ರಪ್ಪ ನಿಡವಣಿ ಇತರರಿದ್ದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಮ್ಮ ಸಂಸದರ ನಿಧಿಯಿಂದ 1 ಕೋಟಿ ರೂ. ಅನ್ನು ಕರೋನಾ ಸಂತ್ರಸ್ತರ ನಿಧಿಗೆ ನೀಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಕಳಿಸಿದ್ದಾರೆ.
100 ಕುಟುಂಬಗಳಿಗೆ ದವಸ: ವಾರ್ಡ್ ನಂ. 54ರಲ್ಲಿ ಪಾಲಿಕೆ ಮಾಜಿ ಸದಸ್ಯೆ ಕಮಲಾಕ್ಷಿ ಅಂದಾನಪ್ಪ ಸಜ್ಜನರ ನೇತೃತ್ವದಲ್ಲಿ 100 ಕುಟುಂಬಗಳಿಗೆ ದವಸ, ಧಾನ್ಯ ವಿತರಿಸಲಾಯಿತು. ಮೋಹನ ಹಿಪ್ಪರಗಿ, ರಮೇಶ ಮುತ್ತಗಿ, ಮಂಜು ಜಗದ, ಚೆನ್ನು ಕಲ್ಲೂರ, ಮುರುಗೇಶ ಶೆಟ್ಟರ್, ರಾಜು ಅಣ್ಣಿಗೇರಿ, ಕಲ್ಲಣ್ಣ ಪಾಟೀಲ, ಮಂಜುನಾಥ ನಾಗರಳ್ಳಿ, ವಿನಯ ಸಜ್ಜನರ ಇತರರಿದ್ದರು.
ಗೋದ್ರೆಜ್ ಪ್ರೖೆ.ಲಿ. ಕಂಪನಿಯಿಂದ ಭಾನುವಾರ ಬೆಳಗ್ಗೆ ಪೊಲೀಸರು, ಅನಾಥ ಆಶ್ರಮ, ಪೌರ ಕಾರ್ವಿುಕರು ಇತರರಿಗೆ ಸ್ಯಾನಿಟೈಸರ್ ಮತ್ತು ಉಪಹಾರ ವಿತರಿಸಲಾಯಿತು. ನವೀನ ಉಪ್ಪಾರ, ಶ್ರೀಧರ ಕದಡಿ, ರವಿ ವಾಳದ, ಶ್ರೀಕಾಂತ, ಶಫಿ ಇತರರಿದ್ದರು.
ಆರ್ಪಿಎಫ್ನಿಂದ ಆಹಾರ ಪೊಟ್ಟಣ ವಿತರಣೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಕೂಲಿ ಕಾರ್ವಿುಕರು, ಬಡವರು ಹಾಗೂ ಭಿಕ್ಷುಕರಿಗೆ ರೈಲ್ವೆ ಭದ್ರತಾ ದಳವು ಆಹಾರ ಪೊಟ್ಟಣಗಳನ್ನು ವಿತರಿಸಿತು. ನೈಋತ್ಯ ರೈಲ್ವೆ ವಲಯ ಮಹಿಳಾ ಕಲ್ಯಾಣ ಸಂಘ, ಆಫಿಸರ್ಸ್ ಕಾಲನಿ, ಐಆರ್ಸಿಟಿಸಿ ಸಹಯೋಗದೊಂದಿಗೆ ಆರ್ಪಿಎಫ್ ಸಿಬ್ಬಂದಿ ರೈಲ್ವೆ ನಿಲ್ದಾಣದ ಆವರಣ, ಮಂಟೂರ ರಸ್ತೆ, ಗಾಂಧಿವಾಡ, ನವಲೂರಿನ ಗೂಡ್ಸ್ಶೆಡ್ನಲ್ಲಿ ಆಹಾರ ಪೊಟ್ಟಣ ವಿತರಿಸಿದರು. ನೈಋತ್ಯ ರೈಲ್ವೆ ವಲಯದಿಂದಲೂ ಭಾನುವಾರದಿಂದ 1 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಹುಬ್ಬಳ್ಳಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೆಡೆ, ವಿಭಾಗೀಯ ಭದ್ರತಾ ಆಯುಕ್ತ ವಲ್ಲೇಶ್ವರ ಇತರ ಹಿರಿಯ ಅಧಿಕಾರಿಗಳಿದ್ದರು.
ಬಡವರಿಗೆ ಅಕ್ಕಿ ವಿತರಣೆ: ದಿನಗೂಲಿ ಕಾರ್ವಿುಕರಿಗೆ ಜೀವನ ನಡೆಸುವುದು ಕಷ್ಟಕರವಾಗಿದ್ದು, ಈ ಕುಟುಂಬಗಳಿಗೆ ನೆರವಾಗಲು ಎಸ್ಎಸ್ಕೆ ಸಮಾಜದ ಮುಖಂಡರು ಮುಂದೆ ಬಂದಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು 4500 ಕೆಜಿ ಅಕ್ಕಿಯನ್ನು ವಿತರಿಸಲು ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ ಅವರಿಗೆ ಶನಿವಾರ ದಾಜಿಬಾನಪೇಟ ತುಳಜಾಭವಾನಿ ದೇವಸ್ಥಾನದಲ್ಲಿ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಉಪಧರ್ಮದರ್ಶಿ ಹನುಮಂತಸಾ ನಿರಂಜನ, ಎಸ್.ಎಸ್.ಕೆ ಬ್ಯಾಂಕ್ ಚೇರಮನ್ ವಿಠ್ಠಲ ಲದವಾ, ಎನ್.ಎನ್. ಖೋಡೆ, ಕಿಶೋರ್ ಜಿತೂರಿ, ಡಿ.ಕೆ. ಚವ್ಹಾಣ, ರಾಜು ಧರ್ಮದಾಸ, ಗೋಪಾಲ ಬದ್ದಿ, ಪರುಶುರಾಮ ಹಬೀಬ, ರಾಜು ಜರತಾರಾಘರ್, ಶ್ರೀಕಾಂತ ಧರ್ಮದಾಸ, ಶ್ರೀನಿವಾಸ ರಾಯಬಾಗಿ, ವಿನಾಯಕ ಲದ್ವಾ, ವಿಜಯ ಕಲಬುರ್ಗಿ, ವಿಜಯ ಮೆಹರವಾಡೆ, ದೀಪಕ ಜಿತೂರಿ, ಅಮೃತ ದಾನಿ, ಮುಂತಾದವರು ಭಾಗವಹಿಸಿದ್ದರು.
5000 ಮಾಸ್ಕ್ ವಿತರಣೆ: ಕರೊನಾ ವೈರಾಣು ಹರಡುವಿಕೆ ತಡೆಗೆ ಪೊಲೀಸ್, ಪಾಲಿಕೆ ಹಾಗೂ ಇತರ ಇಲಾಖೆಯವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಧಾರವಾಡ ನಗರದ ಶ್ರೀ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎಂಡಿ ಹಾಗೂ ಹೊಂಬೆಳಕು ಫೌಂಡೇಶನ್ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅವರು ಭಾನುವಾರ 5,000 ಮಾಸ್ಕ್ ವಿತರಿಸಿದರು. ಎಸಿಪಿ ಅನುಷಾ ಹಾಗೂ ನಗರದ ವಿವಿಧ ಠಾಣೆಗಳ ಇನ್ಸ್ಪೆಕ್ಟರ್ಗಳ ಮೂಲಕ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ, ಪಾಲಿಕೆ ಅಧಿಕಾರಿ ಮೂಲಕವೂ ನೀಡಿದರು. ಇದೇ ವೇಳೆ ಕೂಲಿ ಕಾರ್ವಿುಕರಿಗೂ ಮಾಸ್ಕ್ ವಿತರಿಸಿದರು. ಬಟ್ಟೆಯಿಂದ ಹೊಲಿಸಿದ ಮಾಸ್ಕ್ಗಳು ತೊಳೆದು ಮರುಬಳಸುವಂತೆ ಸಿದ್ಧಪಡಿಸಲಾಗಿದೆ.
ಮೊದಲ ಹಂತವಾಗಿ ತಮ್ಮ ಜನ್ಮದಿನ ನಿಮಿತ್ತ 5,000 ಮಾಸ್ಕ್ ವಿತರಿಸಲಾಗಿದ್ದು, ಶೀಘ್ರವೇ ವಿವಿಧ ಇಲಾಖೆಗಳ ಮೂಲಕ ಇನ್ನಷ್ಟು ನೀಡಲಾಗುವುದು ಎಂದು ಡಾ. ವೀಣಾ ಬಿರಾದಾರ ತಿಳಿಸಿದರು. ಕಾಲೇಜ್ ಪ್ರಾಚಾರ್ಯ ಪ್ರೊ. ನಾಗರಾಜ ಶಿರೂರ ಹಾಗೂ ಸಿಬ್ಬಂದಿ ಇದ್ದರು.</