ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಕನ್ನಡ ಸೇನೆಯಿಂದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಯಿತು. 
ಜಿಲ್ಲೆ

ಸಂಘಟನೆ ಜನಪರವಾಗಿರುವುದು ಹೆಮ್ಮೆಯ ಸಂಗತಿ

ಚಿಕ್ಕಮಗಳೂರು: ಕನ್ನಡಿಗರ ನೆಲ, ಜಲದ ಸ್ವಾಭಿಮಾನ ಸಂಕೇತವಾಗಿ ಹೋರಾಡುತ್ತಿರುವ ಕನ್ನಡಸೇನೆ ಸಂಘಟನೆ ಸಮಾಜದಲ್ಲಿ ಜನಪರವಾಗಿ ನಿಂತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಮೋಹನ್‌ಕುಮಾರ್ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯಾಧ್ಯಕ್ಷರ ಜನ್ಮದಿನವನ್ನು ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ವಿತರಣೆ ಹಾಗೂ ವೈದ್ಯರು ಹಾಗೂ ಸಿಬ್ಬ ಂದಿಗೆ ಅಭಿನಂದಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವುದು ಹೆಮ್ಮೆಯ ಸಂಗತಿ. ಮುಂದೆ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡು ಬಡವರ, ದೀನದಲಿತರಿಗೆ ಆಸರೆ ನೀಡುವಂತಾಲಿ ಎಂದು ಆಶಿಸಿದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಬಡವರು, ಮಧ್ಯಮ ವರ್ಗದವರಿಗೆ ಜಿಲ್ಲಾಸ್ಪತ್ರೆ ದೇಗುಲವಿದ್ದಂತೆ. ಪ್ರಾಣದ ಹಂಗು ತೊರೆದು ದಿನದ ಇಪ್ಪತ್ತಾಲ್ಕು ವರ್ಷಗಳ ಕಾಲ ಚಿಕಿತ್ಸೆ ಕೊಡುವ ವೈದ್ಯರುಗಳು ದೈವಸ್ವರೂಪಿಗಳಾದ ಕಾರಣ ರಾಜ್ಯಾಧ್ಯಕ್ಷರ ಜನ್ಮದಿನವನ್ನು ಪ್ರಾಣ ಉಳಿಸುವ ವೈದ್ಯರಿಗೆ ಗೌರವಿಸುವ ಮೂಲಕ ಅರ್ಪಿಸಲಾಗಿದೆ ಎಂದರು.

ಕೋವಿಡ್ ಸಮಯದಲ್ಲಿ ಮನೆಮಂದಿಯೇ ಸ್ವಂತ ಕುಟುಂಬಸ್ಥರನ್ನು ಮುಟ್ಟಲು ಭಯಬೀಳುವ ವೇಳೆಯಲ್ಲಿ ಬದುಕಿನ ಆಸೆಯನ್ನು ಬದಿಗಿರಿಸಿ,ರೋಗಿಗಳ ರಕ್ಷಣೆಗೆ ಎಲೆಮರೆಕಾಯಿಯಂತೆ ಮೊಟ್ಟಮೊದಲು ಚಿಕಿತ್ಸೆಗೆ ಮುಂದಾದ ವೈದ್ಯಕೀಯ ಲೋಕದ ಸೇವೆ ಸ್ಮರಿಸುವುದು ಕರ್ತವ್ಯ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರೋಗಿಗಳ ಆರೋಗ್ಯದ ಸುರಕ್ಷಿ ತೆ, ಧೈರ್ಯ ತುಂಬುವ ಕಾಳಜಿ ವಹಿಸುವ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಬಡವರ ಪಾಲಿಗೆ ಪ್ರತ್ಯಕ್ಷ ದೇವರೆಂದರೆ ತಪ್ಪಲಾಗುವುದಿಲ್ಲ. ಆ ನಿಟ್ಟಿನಲ್ಲಿ ಕನ್ನಡಸೇನೆ ಸಾಮಾಜಿಕ ಹೋರಾಟದ ಜೊತೆಗೆ ಈ ರೀತಿಯ ವಿಶೇಷ ಕಾರ್ಯಕ್ರಮ ಮಾಡಿರುವುದು ಖುಷಿಯ ಸಂಗತಿ ಎಂದರು.

ಇದೇ ವೇಳೆ ಜಿಲ್ಲಾಸ್ಪತ್ರೆ ವೈದ್ಯರಾದ ಡಾ. ಚಂದ್ರಶೇಖರ್, ಡಾ. ಮುರುಳಿಧರ್, ಡಾ. ವೆಂಕಟೇಶ್, ಡಾ. ನಾಗರಾಜ್ ಸೇರಿದಂತೆ ಒಟ್ಟು ೧೪ ಮಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭೀಮ್‌ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ಕುಮಾರ್, ಹಿರಿಯ ವೈದ್ಯ ಡಾ. ಕೆ.ಸುಂದರಗೌಡ, ಕನ್ನಡಸೇನೆ ಮುಖಂಡರಾದ ಜಯಪ್ರಕಾಶ್, ಲಕ್ಷö್ಮಣ್, ರವಿ, ಶಂಕರೇಗೌಡ, ಸತೀಶ್, ಅನ್ವರ್, ಕುಮಾರ್, ಆಶ್ರಫ್, ಪಾಪಣ್ಣ, ವಿನಯ್ ಮತ್ತಿತರರಿದ್ದರು.