ಜಿಲ್ಲೆ

ಸಂಘಟನೆ ಜತೆಗೆ ಜನರ ನೆರವಿಗೆ ಬನ್ನಿ

ಕಮಲಾಪುರ: ಇಲ್ಲಿಯವರೆಗೆ ಸರ್ಕಾರ 68 ಲಕ್ಷ ಜನರ ಮನೆ ಬಾಗಿಲಿಗೆ ರೇಷನ್ ಕಿಟ್ ಹಾಗೂ ಔಷದಿಗಳನ್ನು ತಲುಪಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್​ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಗ್ರಾಮೀಣ ಮಂಡಲ ಪದಾಧಿಕಾರಿಗಳ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೂತ್ ಮಟ್ಟದಿಂದ ಪಕ್ಷ ಸಂಘಟನೆ ನಡೆಸುವುದು ಅವಶ್ಯವಾಗಿದೆ. ಸಾರ್ವಜನಿಕರಿಗೆ ತೊಂದರೆಗಳು ಎದುರಾದಾಗ ನಮ್ಮ ಕಾರ್ಯಕರ್ತರು ಸಹಾಯ ಮಾಡಬೇಕು. ಕೋವಿಡ್ ಸಂತ್ರಸ್ತರ ನೆರವಿಗೆ ಬನ್ನಿ ಎಂದು ಕರೆ ನೀಡಿದರು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಸದೃಢ ರಾಷ್ಟ್ರವಾಗಿ ಮುನ್ನುಗುತ್ತಿದ್ದು, ಕಾರ್ಯಕರ್ತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸಬೇಕು ಎಂದು ತಾಕೀತು ಮಾಡಿದರು.
ಸಚಿವ ಪ್ರಭು ಚವ್ಹಾಣ್, ಬೀದರ್ ಸಂಸದ ಭಗವಂತ ಖೂಬಾ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ, ಸುಭಾಷ ಗುತ್ತೇದಾರ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಸುನೀಲ್ ವಲಾ್ಲೃಪುರೆ, ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರಮುಖರಾದ ಸುಭಾಷ ಬಿರಾದಾರ, ಹರ್ಷಾನಂದ ಗುತ್ತೇದಾರ್, ರವಿ ಬಿರಾದಾರ, ರಾಜಕುಮಾರ ಕೋಟೆ, ಜಗನ್ನಾಥ ಮಾಲಿಪಾಟೀಲ್, ಯಶವಂತ ಅಷ್ಟಗಿ, ಗುರುನಾಥ ಸೊನ್ನದ, ಶಶಿಧರ ಮಾಕಾ, ಸಾಗರ ಗುತ್ತೇದಾರ್, ಶಿವಕುಮಾರ ಅಷ್ಟಗಿ ಇದ್ದರು.