ಹುಲಸೂರು: ಯಾವುದೇ ಸಂಘ-ಸಂಸ್ಥೆಗಳು ಬೆಳೆಯಲು ಎಲ್ಲರ ಸಹಾಯ, ಸಹಕಾರ ಅಗತ್ಯ ಎಂದು ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ ಹೇಳಿದರು.
ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೬೭ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳು ರೈತರ ಹಾಗೂ ಸ್ವ ಸಹಾಯ ಸಂಘಗಳ ಜೀವನಾಡಿಯಾಗಿವೆ. ಸಾಲ ನೀಡುವ ಜತೆಗೆ ಹಲವು ಅಭಿವೃದ್ಧಿಗೆ ಸಾಥ್ ನೀಡುತ್ತಿವೆ ಎಂದರು.
ಸಂಘದ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ೧೦,೦೦೦ ಸಾವಿರ ರೂ. ಸಹಾಯಧನ ನೀಡಿ, ಸಂಘ ಜಿಲ್ಲೆಯಲ್ಲಿ ಮಾದರಿಯಾಗಿದೆ. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನಕ್ಕೆ ಸಹಕಾರ ನೀಡಲಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಓಂಕಾರ ಪಟ್ನೆ ಮಾತನಾಡಿ, ಕೆಸಿಸಿ ಸಾಲಗಾರರಿಗೆ ತೊಂದರೆ ಇಲ್ಲದೆ ಸಾಲ ನೀಡುತ್ತಿದ್ದೇವೆ. ರೈತರಿಗೆ ಸಾಲ ಅಷ್ಟೇ ಅಲ್ಲ ಬಿತ್ತನೆ ಮಾಡಲು ರಸಗೊಬ್ಬರ ಕೊರತೆ ಆಗದಂತೆ ವಿತರಿಸಿದ್ದೇವೆ. ಎಲ್ಲರ ಸಹಕಾರದಿಂದ ಪಿಕೆಪಿಎಸ್ ಪ್ರಗತಿಯಲ್ಲಿದೆ. ರೈತರು ಪಡೆದ ಸಾಲ ಸಕಾಲಕ್ಕೆ ಮರುಪಾವತಿಸಿದರೆ ಸಮಸ್ಯೆ ಬರುವುದಿಲ್ಲ ಎಂದರು.
ವಿವಿಧ ಗ್ರಾಮದಿಂದ ಆಗಮಿಸಿದ್ದ ರೈತರನ್ನು ಸನ್ಮಾನಿಸಲಾಯಿತು. ರೈತ ಲಕ್ಷö್ಮಣ ಹೇಮಲಾ ಉದ್ಘಾಟಿಸಿದರು. ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು. ಸಂಘದ ಉಪಾಧ್ಯಕ್ಷ ಕಾಶೀನಾಥ ಪಾಟೀಲ್, ಎಫ್.ಎ.ಅನೀಲ ಮೋರೆ, ಬಸವರಾಜ ಹಾರಕೂಡೆ, ಬಸವರಾಜ ಜಡಗೆ, ಪ್ರವೀಣ ಕಾಡಾದಿ, ಗುಣವಂತರಾವ ಹಲಸೆ, ಅಶೋಕ ಮೇತ್ರೆ, ಹೀರು ರಾಠೋಡ, ಲಕ್ಷಿö್ಮಬಾಯಿ ಬಂಗ, ರೂಪಾವತಿ ಜಾಧವ್, ಜನಾಬಾಯಿ ಅಂಕುಶ, ಕರಣ ಕೃಷ್ಣಾಜಿ, ದಿಲಶುಕ್, ಶಂಕ್ರೆಪ್ಪ ಪಾಟೀಲ್, ಶಿವಶಂಕರ ಮುಳೆ, ರಾಜಾರಾಮ, ಅಶೋಕ ಬಿರಾದಾರ ಇತರರಿದ್ದರು. ರಾಜಕುಮಾರ ಹೊನ್ನಾಡೆ ಸ್ವಾಗತಿಸಿ, ನಿರೂಪಣೆ ಮಾಡಿದರು.