ಬೈಲಹೊಂಗಲ: ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ನಿಮಿತ್ತ ಸೋಮವಾರ ಜರುಗಿದ ರಸಮಂಜರಿ ಕಾರ್ಯಕ್ರಮ ಪ್ರೇಕರ ಮನ ಸೆಳೆಯಿತು.
ಗಾಯಕ ರಾಜೇಶ ಕೃಷ್ಣನ್ ಅವರು ಬೊಂಬೆ ಹೇಳತೆತಿ ಹಾಡನ್ನು ಸಹಕಲಾವಿದರೊಂದಿಗೆ ನತ್ಯ ಮಾಡುತ್ತ ಹಾಡಿದಾಗ ಯುವಜನರು ಖುಷಿಯಾದರು. ಗಾಯಕ ಚಿನ್ಮಯ್ ತ್ರೇಯಾ ಹಾಗೂ ಗಾಯಕಿ ಸುಹಾನ್ ಸಯ್ಯದ್, ಗಾಯಕಿ ಪೃಥ್ವಿ ಭಟ್ ಸಾಥ್ ನೀಡಿದರು. ಸಂಗೊಳ್ಳಿ ಗ್ರಾಮದೇವಿ ಭಜನಾ ಮಂಡಳ ಹಾಗೂ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳಿಯಿಂದ ಭಜನೆ, ತತ್ತ್ವಪದ, ಭಾವಗೀತೆ, ನತ್ಯ, ಶಹನಾಯಿ, ಹಾಸ್ಯದ ಹೊನಲು, ಜಾನಪದ ಸಂಗೀತ, ಸುಗಮ ಸಂಗೀತ, ನತ್ಯ ರೂಪಕ, ಶ್ರೀಕೃಷ್ಣ ಪಾರಿಜಾತ ಸೊಗಸಾಗಿ ಮೂಡಿ ಬಂದಿತು. ಎರಡನೇ ದಿನದ ಸಂಗಿತೋತ್ಸವದಲ್ಲಿ ಹಲವಾರು ಭಜನೆ, ಡೊಳ್ಳಿನ ಹಾಡು, ಜಾನಪದ ಸಂಗೀತ, ಸಂಗೀತ ವೆವಿಧ್ಯ, ಸುಗಮ ಸಂಗೀತ, ನತ್ಯ ವೆವಿದ್ಯ, ಜಾನಪದ ನತ್ಯ, ಗಾಯಕಿ ಶಮಿತಾ ಮಲ್ನಾಡ ತಂಡದಿಂದ ರಸಮಂಜರಿ, ರಂಗಮಿತ್ರ ಅಲ್ತಾಪ ತಂಡದಿಂದ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ನಡೆಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ತಾಪಂ ಇಇ ಕಿರಣ ೂರ್ಪಡೆ, ಪಿಎಸ್ಐ ಎ್.ವೆ. ಮಲ್ಲೂರ, ಗ್ರಾಪಂ ಅಧ್ಯೆ ರೂಪಾ ಚಚಡಿ, ಉಪಾಧ್ಯ ಕ್ಕೀರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ರತ್ನಾ ಆನೇಮಠ, ಈರಣ್ಣ ಹಳಿಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವಣ್ಣವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕೊಡೊಳ್ಳಿ, ಸನಾ ಖುದ್ದುನವರ, ಗಂಗವ್ವ ಪೂಜೇರ, ಪಿಡಿಒ ಅಡಿವೆಪ್ಪ ತಳವಾರ, ಗಣ್ಯರಾದ ಅರುಣ ಯಲಿಗಾರ, ಮಹೇಶ ಹಿರೇಮಠ, ಆಕಾಶ ಮಾಲಬನ್ನವರ, ಇತರರಿದ್ದರು.