ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಹಿರಿಯ ಪ್ರಾಧ್ಯಾಪಕಿ ಡಾ.ಜ್ಯೋತಿಲಕ್ಷ್ಮೀ ಡಿ.ಪಿ. ಉದ್ಘಾಟಿಸಿದರು. ಪ್ರಾಚಾರ್ಯೆ ಜಾನಕಿ ಹೊಸೂರ, ಡಾ.ಪುಟ್ಟಮಣಿ ದೇವಿದಾಸ, ಡಾ.ಸೀಮಾ ಪಾಟೀಲ್ ಇದ್ದರು. 
ಜಿಲ್ಲೆ

ಸಂಗೀತಕ್ಕಿದೆ ಮನಸ್ಸು ನಿಯಂತ್ರಿಸುವ ಶಕ್ತಿ

ರಾಜು ಯಮಕನಮರಡಿ

ಕಲಬುರಗಿ: ಚಂಚಲ ಮನಸ್ಸನ್ನು ಹಿಡಿದಿಡುವ ಶಕ್ತಿ ಸಂಗೀತಕ್ಕಿದೆ ಎಂದು ಹುಬ್ಬಳಿಯ ಎಸ್‌ಜೆಎಂವಿಎಸ್ ಮಹಾವಿದ್ಯಾಲಯದ ಸಂಗೀತ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಜ್ಯೋತಿಲಕ್ಷ್ಮೀ ಡಿ.ಪಿ ಅಭಿಪ್ರಾಯಪಟ್ಟರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಸಂಗೀತ ಮತ್ತು ಮನೋವಿಜ್ಞಾನ ವಿಷಯ ಕುರಿತು ಮಾತನಾಡಿದ ಅವರು, ರಾಗದಿಂದ ರೋಗ ದೂರಾಗಲಿದೆ. ಒತ್ತಡದ ಜೀವನದಲ್ಲಿ ಕೆಲವು ರಾಗಗಳಿಂದ ಮಾನಸಿಕ ರೋಗ ನಿಯಂತ್ರಿಸಬಹುದು. ಮನುಷ್ಯನ ನಾಡಿಮಿಡಿತವೂ ಒಂದು ಸಂಗೀತವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯೆ ಜಾನಕಿ ಹೊಸೂರ ಮಾತನಾಡಿ, ಸಂಗೀತಕ್ಕೆ ಎಂತಹವರನ್ನೂ ಆಕರ್ಷಿಸುವ ಶಕ್ತಿ ಇದೆ. ಸಂಗೀತದಿಂದ ಮೈ ಮನಗಳು ಉಲ್ಲಾಸಗೊಳ್ಳುತ್ತವೆ ಎಂದು ಹೇಳಿದರು.

ಕಲಾವಿದರಾದ ಅಣ್ಣಾರಾವ್ ಮತ್ತಿಮಡು, ಸೈದಪ್ಪ ಚೌಡಾಪುರ ಅತಿಥಿಯಾಗಿದ್ದರು. ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯುಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ್ ಇದ್ದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ವೀರಭದ್ರಯ್ಯ ಸ್ಥಾವರಮಠ ನಿರೂಪಣೆ ಮಾಡಿ ವಂದಿಸಿದರು.