ಜಿಲ್ಲೆ

ಸಂಗೀತ ಸಮ್ಮೇಳನಕ್ಕೆ ನಾಯಕ ಸರ್ವಾಧ್ಯಕ್ಷ

ಬೀದರ್: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ 30ರಂದು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಸಂಗೀತ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಅವರನ್ನು ಆಯ್ಕೆ ಮಾಡಲಾಗಿದೆ.

ಲಿಂ.ಪಂಡಿತ ಪಂಚಾಕ್ಷರ ಗವಾಯಿ 77ನೇ ಪುಣ್ಯತಿಥಿ, ಪದ್ಮಭೂಷಣ ಡಾ.ಪಂಡಿತ ಪುಟ್ಟರಾಜ ಗವಾಯಿಗಳ 11ನೇ ಪುಣ್ಯತಿಥಿ ಹಾಗೂ ಸಂಘದ 19ನೇ ವಾರ್ಷಿಕೋತ್ಸವ ನಿಮಿತ್ತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸರ್ವಾಧ್ಯಕ್ಷರಾಗಿ ಆಯ್ಕೆಯಾದ ದೊರೆ ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಸಂಘದ ನಿಯೋಗ ಕಲಬುರಗಿಯ ಪ್ರಶಾಂತನಗರ ಬಡಾವಣೆಯಲ್ಲಿರುವ ದೊರೆ ಅವರ ನಿವಾಸಕ್ಕೆ ತೆರಳಿ ಆಹ್ವಾನ ಪತ್ರ ನೀಡಿ ಸತ್ಕರಿಸಿತು. ಸಂಘದ ದಾನಿ ಬಾಬುರಾವ, ಶಿವಕುಮಾರ ಕಟ್ಟೆ, ಸುರೇಂದ್ರ ಹುಡಗಿಕರ್ ಇದ್ದರು.