ಜಿಲ್ಲೆ

ಸಂಗೀತ ಶಿವಾನುಭವ ಸಮಿತಿಗೆ ನವಲಿಂಗ ರಾಜ್ಯ ಸಂಚಾಲಕ

ಬೀದರ್ : ಅಖಿಲ ಕನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಸಂಗೀತ ಶಿವಾನುಭವ ಸಮಿತಿ ರಾಜ್ಯ ಸಂಚಾಲಕರಾಗಿ ಇಲ್ಲಿಯ ಬಹುಮುಖಿ ಕಲಾವಿದ ನವಲಿಂಗ ಪಾಟೀಲ್ ಅವರನ್ನು ನೇಮಿಸಲಾಗಿದೆ.

ಎರಡು ವರ್ಷದ ಅವಧಿಗಾಗಿ ಈ ನೇಮಕ ಮಾಡಲಾಗಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ವೇದ ಮೂರ್ತಿ ಚನ್ನವೀರಸ್ವಾಮಿ ಹಿರೇಮಠ ಅವರು ನವಲಿಂಗ ಪಾಟೀಲರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಸಂಗೀತ, ಸಾಹಿತ್ಯ, ಅಧ್ಯಾತ್ಮ, ಯೋಗ ಮತ್ತು ಭಾರತೀಯ ಕಲಾ ಪರಂಪರೆ ಸೇವೆಗೆ ಡಾ. ಪುಟ್ಟರಾಜ ಕವಿ ಗವಾಯಿ ಸಂಗೀತ ಪರಿಷತ್ ಸ್ಥಾಪಿಸಿದ್ದಾರೆ. ಇದರ ಅಧೀನದ ವಿನೂತನ ಚಟುವಟಿಕೆ ನಡೆಸಲು ಶಿವಾನುಭವ ಸಮಿತಿ ರಚಿಸಲಾಗಿದೆ. ರಾಜ್ಯ ಸಂಚಾಲಕ ಜವಾಬ್ದಾರಿ ವಹಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮನ್ನಾಎಖ್ಖೇಳ್ಳಿಯ ನವಲಿಂಗ ಪಾಟೀಲ್ ಬಹುಮುಖಿ ಪ್ರತಿಭೆಯುಳ್ಳವರು. ಹಾಸ್ಯ ಕಲಾವಿದರಾಗಿ ಹೆಸರು ಮಾಡಿದ್ದಾರೆ. ಗಾಯನ, ತಬಲಾ ವಾದನ, ಹಾರ್ಮೋನಿಯಂ, ಮಿಮಿಕ್ರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ, ರಾಜ್ಯಮಟ್ಟದಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಉತ್ತಮ ನಿರೂಪಕರೂ ಆಗಿದ್ದಾರೆ.