ಜಿಲ್ಲೆ

ಸಂಗೀತ ಆಸ್ವಾದಿಸಿದ ಕೈದಿಗಳು

reporterctd

ದಾವಣಗೆರೆ: ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ, ವಿಚಾರಣಾಧೀನ ಕೈದಿಗಳ ಮನಕ್ಕೆ ಲಗ್ಗೆ ಹಾಕಿತು. ಭಾರತಿ ವಾದ್ಯ ವೃಂದದ ಕಲಾವಿದರೊಟ್ಟಿಗೆ ತಾವೂ ಹಾಡಿದರು. ಜೈಲಿನ ಸಿಬ್ಬಂದಿ ಕೂಡ ಜತೆಯಾದರು.

ಸುವರ್ಣ ಕರ್ನಾಟಕ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ವಿಚಾರಣಾಧೀನ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಕಾರಾಗೃಹದಿಂದ ತೆರಳಬೇಕು. ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ವೇದಿಕೆಯ ಅಧ್ಯಕ್ಷ ಸಂತೋಷ್‌ಕುಮಾರ್, ಬೆಳ್ಳೂಡಿ ಶಿವಕುಮಾರ್, ಮಹಾಂತೇಶ ಒಣರೊಟ್ಟಿ, ಕಾರಾಗೃಹ ಅಧೀಕ್ಷಕಿ ಎನ್. ಭಾಗೀರಥಿ , ಜೈಲರ್ ಕೆ.ಎಸ್.ಮಾನ್ವಿ, ಸಿಪಿಐ ಕೆ.ಎನ್. ಗಜೇಂದ್ರಪ್ಪ, ವಕೀಲ ಮನೋಜ್‌ಕುಮಾರ್, ಪಳನಿಸ್ವಾಮಿ, ಎನ್.ಆರ್. ನಾಗಭೂಷಣ್‌ರಾವ್, ಶ್ರೀನಿವಾಸ್ ಎಸ್.ಪಿ., ಟಿ.ವಿ.ಮಂಜಣ್ಣ ಪೈಲ್ವಾನ್ ಇತರರಿದ್ದರು.