ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಡೆಂಘೆ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತೀವೆ. ಸಾರ್ವಜನಿಕರಿಗೆ ಸಮಸ್ಯೆಗೆ ತುತ್ತಾಗಿದ್ದಾರೆ. ಕೂಡಲೇ ನಗರಸಭೆ ನಗರದ ಸ್ವಚ್ಛತೆ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವದಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ನಗರಸಭೆ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಮಾಡದಿರುವುದು, ಪಾಗಿಂಗ್ ಮಾಡುತ್ತಿಲ್ಲ, ಡಿಡಿ ಫೌಡರ ಸಿಂಪಡಿಸದಿರುವ ದೂರುಗಳು ಕೇಳಿಬಂದಿದೆ. ತಕ್ಷಣಕ್ಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಖಟಕ್ ಸೂಚನೆ ನೀಡಿದರು.
ಇನ್ನು ನಗರದ ಸಮಸ್ಯೆ, ಸ್ವಚ್ಛತೆ ವಿಷಯದಲ್ಲಿ ವಿಶೇಷವಾಗಿ ಆಯಕ್ತರು, ಅಧ್ಯಕ್ಷ, ಉಪಾಧ್ಯಕ್ಷ, ಸಭಾಪತಿ ಒತ್ತು ನೀಡಿ. ಪ್ರತಿ ದಿನ,ವಾರಕ್ಕೂ ಒಂದು ಸಾರಿ ನಗರದಲ್ಲಿ ಸಂಚಾರ ಮಾಡಬೇಕು. ಕುಡಿಯುವ ನೀರಿನ ತೊಂದರೆ, ವಿದ್ಯುತ್ ಸಂಪರ್ಕ, ಸ್ವಚ್ಛತೆ ಕುರಿತು ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಅರಿತು ಪರಿಹರಿಸಬೇಕು. ನಗರಸಭೆಯ ಕೆಲವೊಂದು ಅಧಿಕಾರಿಗಳು, ಇಂಜನಿಯರಗಳು ಬಾಗಲಕೋಟೆ ನಗರದ ಕೆಲಸ ಬಗ್ಗೆ ನಿಷ್ಕೃಯಗೊಂಡಿರುವುದು ಕಂಡು ಬಂದಿದೆ. ಎಲ್ಲ ಸಮಸ್ಯೆಗಳಿಗೂ ಓರ್ವ ಅಧಿಕಾರಿ ಸ್ಪಂದಿಸುವುದರಿಂದ ಇತ್ಯರ್ಥವಾಗವದಿಲ್ಲ. ಇನ್ನೂ ಸದಸ್ಯರು ಪೋನ್ ಮಾಡಿದಾಗ ಪೋನ್ ಸಂಪರ್ಕದಲ್ಲಿ ಇರುವುದಿಲ್ಲ ಎನ್ನುವ ದೂರುಗಳು ಕೇಳಿ ಬಂದಿದೆ. ಹೀಗೆ ಆದರೇ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಠಿಣ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ಬುಡಾ ಆಯುಕ್ತ ಗಣಪತಿ ಪಾಟೀಲ ಉಪಸ್ಥಿತಿರಿದ್ದರು.
ಬಾಕ್ಸ್..
ಪ್ರಮುಖ ವೃತ್ತಗಳಿಗೆ ನಾಮಕರಣಕ್ಕೆ ಪ್ರಸ್ತಾವನೆ…
ಬಾಗಲಕೋಟೆ ಪಟ್ಟಣದ ವ್ಯಾಪ್ತಿಯಲ್ಲಿ (ನವನಗರ ಹೊರತುಪಡಿಸಿ) ೨೦೨೩-೨೪ನೇ ಸಾಲಿಗಾಗಿ ಸಂತೆ ಕರ ಬಹಿರಂಗ ಹರಾಜು ಕರೆಯುವುದು, ೨೦೨೧-೨೨ನೇ ಸಾಲಿನ ಎಸ್.ಎಫ್.ಸಿ. ಅನುದಾನದಲ್ಲಿ ರೂ.೩೦ ಲಕ್ಷ ಬದಲಿ ಕಾಮಗಾರಿ ತೆಗೆದುಕೊಳ್ಳುವ, ನಗರಸಭೆಯ ವ್ಯಾಪ್ತಿಯಲ್ಲಿನ ನಗರಸಭೆ ಒಡೆತನದ ಸಾರ್ವಜನಿಕ ಉಪಯೋಗಕ್ಕಾಗಿ (ಸಿ.ಎ) ಮೀಸಲಿಟ್ಟಿರುವ ಜಾಗೆಗಳನ್ನು ಸಂಘ ಸಂಸ್ಥೆಗಳಿಗೆ ಲೀಜ್ ನೀಡುವುದು, ನಗರಸಭೆಯ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಇರುವ ೦೧ಎ- ೨೦ ಗುಂ ಜಮೀನನ್ನು ಬಯೋ ಮೆಡಿಕಲ್ ವೇಸ್ಟ್ ಸಂಸ್ಕರಣಾ ಘಟಕಕ್ಕೆ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಆದ್ಯ ವಚನಕಾರ ದೇವರದಾಸಿಮಯ್ಯರವರ ಹೆಸರನ್ನು ವಿದ್ಯಾಗಿರಿ/ನವನಗರದ ಪ್ರಮುಖ ವೃತ್ತಕ್ಕೆ ನಾಮಕಾರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.