ಜಿಲ್ಲೆ

ಸಂಕಷ್ಟಕ್ಕೆ ಎದೆಗುಂದದೆ ಮುನ್ನುಗ್ಗಿ

ಚಿತ್ರದುರ್ಗ: ಜೀವನದಲ್ಲಿ ಸೋಲು-ಗೆಲುವು, ಸಂಕಷ್ಟಗಳು ಎದುರಾಗುವುದು ಸಹಜ. ಜೀವನದ ಸಂಕಷ್ಟಗಳಿಗೆ ಎದೆಗುಂದದೆ ಧೈರ್ಯದಿಂದ ಎದುರಿಸುವಂತೆ ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ,ದಾವಣಗೆರೆ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸಂಭ್ರಮ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ,ಅದರಂತೆ ಹೆಣ್ಣು ಸಮಾಜ, ಕುಟುಂಬ, ಸಂಕಷ್ಟಗಳನ್ನು ಸರಾಗವಾಗಿ ಸಾಗಿಸುತ್ತಾಳೆ. ಹಾಗಾಗಿ ಹೆಣ್ಣು ಮಕ್ಕಳು ಹೆಚ್ಚಿನ ವಿ ದ್ಯಾಭ್ಯಾಸ ಮಾಡಬೇಕೆಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ ಮಾತನಾಡಿ,ಉನ್ನತ ಶಿಕ್ಷಣ ಮಹಿಳೆಯರಿಗೆ ವಿಶೇಷ ಅವಕಾಶ ನೀಡಲಿದೆ. ನೋವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಸೋಲು ಎದುರಾದಾಗ ಎದೆಗುಂದದೆ ನಿರಂತರ ಛಲದಿಂದ ಸಾಗಿದರೆ ಖಂ ಡಿತಾ ಗೆಲವು ಸಾಧ್ಯವಾಗಲಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಮಂಜುನಾಥ್ ಮಾತನಾಡಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸಿ.ಚನ್ನಕೇಶವ,ಲೀಲಾವತಿ, ಡಾ.ಡಿ.ಒ.ಸಿದ್ದಪ್ಪ,ಡಾ.ಶಿವಣ್ಣ, ಡಾ.ಮಧುಸೂದನ್, ಬಿ.ಎಚ್.ಕುಮಾರಸ್ವಾಮಿ, ಎಂ.ಗಿರೀಶ್, ಆರ್. ಶಿವಪ್ರಸಾದ್, ಆ ರ್.ವೆಂಕಟೇಶ್, ಸರಿತಾ, ಶಕುಂತಲಾ ಮತ್ತಿತರರು ಇದ್ದರು.