ಜಿಲ್ಲೆ

ಷೇರ್ ಲಾಭ ನೆಪದಲ್ಲಿ ರು. 23.94 ಲಕ್ಷ ಮೋಸ

ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ ಷೇರ್‌ಗಳನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಡುವುದಾಗಿ ನಂಬಿಸಿ ೨೩.೯೪ ಲಕ್ಷ ರೂ. ಮೋಸ ಮಾಡಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಜಗತ್ ನಿವಾಸಿ ಡಾ.ಸ್ವಾತಿ ದೇವಣಿ ಮೋಸಕ್ಕೆ ಒಳಗಾದವರು. ಮುಂಬೈನ ಮಾಸ್ಟರ್ ಕ್ಯಾಪಿಟಲ್ ಲಿಮಿಟೆಡ್ ಕಂಪನಿಯ ಷೇರ್ ಖರೀದಿಸಿ ಲಾಭ ಮಾಡಿಕೊಡುವುದಾಗಿ ರವಿ ಪಟೇಲ್, ಅನೀಲ ದೇಶಮುಖ ಕರೆ ಮಾಡಿ, ನಂಬಿಸಿದ್ದಾರೆ. ಅವರ ಮಾತು ನಂಬಿ ವಿವಿಧ ಬ್ಯಾಂಕ್‌ಗಳಿAದ ಆರ್‌ಟಿಜಿಎಸ್, ಐಎಂಪಿಎಸ್ ಮೂಲಕ ಹಂತ ಹಂತವಾಗಿ ೨೩.೯೪ ಲಕ್ಷ ರೂ. ಜಮಾ ಮಾಡಿದ್ದಾರೆ. ಆದರೆ ಲಾಭ ನೀಡದೆ, ಜಮಾ ಮಾಡಿದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಡಾ.ಸ್ವಾತಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.