ಜಿಲ್ಲೆ

ಷೇರು ಮಾರುಕಟ್ಟೆಯಲ್ಲಿ ಹೂಡಿ ಲಾಭದ ಆಸೆ ತೋರಿಸಿ ೪೨ ಲಕ್ಷ ರೂ.ವಂಚನೆ


ಕಲಬುಗಿ ನಗರದ ವ್ಯಾಪಾರಿಯೊಬ್ಬರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಮಾಡಿಕೊಡುವ ಆಸೆ ತೋರಿಸಿ ೪೨.೫೦ ಲಕ್ಷ ರೂ. ಪಡೆದುಕೊಂಡು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅರುಣಕುಮಾರ ಎಂಬುವರೇ ವಂಚನೆಗೊಳಗಾದವರು. ಅಹ್ಮದಾಬಾದ ಜಿಲ್ಲೆಯ ವಿಷ್ಣುನಗರದ  ಜಯೇಶಕುಮಾರ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ಷೇರು ಖರೀದಿಸಲು ಅರುಣಕುಮಾರ ಅವರು ತಮ್ಮ ಖಾತೆಯಿಂದ ಆತನ ಬ್ಯಾಂಕ್ ಖಾತೆಗೆ ೪೨.೫೦ ಲಕ್ಷ ರೂ. ಗಳನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿದ್ದರು. ಅದರ ಲಾಭ ಎಲ್ಲ ಸೇರಿ ೧.೭೧ ಕೋ.ರೂ.ಆಗಿದ್ದು ಕೊಡಲು ಜಯೇಶಕುಮಾರ ನಿರಾಕರಿಸಿ ಫೋನ್ ಬಂದ್ ಮಾಡಿಕೊಂಡಿದ್ದ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.