ಜೇವರ್ಗಿ: ವಚನಕಾರ ಅಖಂಡಜ್ಞಾನಿ ಶ್ರೀ ಷಣ್ಮುಖ ಶಿವಯೋಗಿಗಳ ಜಾತ್ರೆ ಮೇ ೨೮ರಂದು ವೈಭವದಿಂದ ಜರುಗಲಿದೆ ಎಂದು ಶ್ರೀಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ರಾಜಶೇಖರ ಸೀರಿ ತಿಳಿಸಿದ್ದಾರೆ. ಜಾತ್ರೆ ನಿಮಿತ್ತ ಮಠದಲ್ಲಿ ಮೇ ೧೭ರಿಂದ ೨೭ರವರೆಗೆ ವಚನ ದರ್ಶನ ಪ್ರವಚನ ನಿತ್ಯ ಸಂಜೆ ೭ರಿಂದ ೮ಗಂಟೆವರೆಗೆ ನಡೆಯಲಿದೆ. ಮೇ ೨೭ ಸಂಜೆ ೬ಕ್ಕೆ ಉಚ್ಛಾಯಿ ಉತ್ಸವ ನಡೆಯಲಿದೆ. ೨೮ ರಂದು ಬೆಳಗ್ಗೆ ೬ರಂದು ಶ್ರೀ ಷಣ್ಮುಖ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾಮಂಗಳಾರತಿ ಜರುಗಲಿದೆ. ಬೆಳಗ್ಗೆ ೧೦ಕ್ಕೆ ವಚನ ಗ್ರಂಥದ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಷಣ್ಮುಖ ಶಿವಯೋಗಿಗಳ ಮಠಕ್ಕೆ ತಲುಪಲಿದೆ. ಸಂಜೆ ೬-೩೦ ಗಂಟೆಗೆ ಭವ್ಯ ರಥೋತ್ಸವ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.