ಜಿಲ್ಲೆ

ಶ್ವಾನಕ್ಕೂ ಹುಟ್ಟುಹಬ್ಬ, ಏನ್ ಅದೃಷ್ಠ ಗುರು

ವಿಜಯಪುರ:ಮನೆಯ ಮುದ್ದಿನ ಶ್ವಾನದ ಬರ್ತಡೆ ಆಚರಿಸಿ ಕುಟುಂಬಸ್ಥರು‌ ಸಂಭ್ರಮಿಸಿದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ‌ ನಡೆದಿದೆ. ಇಲ್ಲಿನ ನಿವಾಸಿ ಸಂಗಯ್ಯ ಪತ್ರಿ ಅವರು ತಮ್ಮ ಮನೆಯ ಮುದ್ದಿನ ಶ್ವಾನಕ್ಕೆ ಬರ್ತಡೆ ಆಚರಿಸಿದ್ದಾರೆ. ತಮ್ಮ ಮನೆಯ ಶ್ವಾನಕ್ಕೆ ಟೈಗರ್ ಎಂದು ಹೆಸರಿಟ್ಟಿದ್ದು, ಅದಕ್ಕೆ 3ನೇ ಹುಟ್ಟುಹಬ್ಬ ಆಚರಣೆ ಮಾಡಿ, ಈ ವೇಳೆ 25ಗ್ರಾಂ ಚಿನ್ನದ ಸರ ಹಾಕಿ, ಕೇಕ್ ಕಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತಡೆ ಎಂದು T ಆಕಾರದಲ್ಲಿ ಅಚ್ಚು ಹಾಕಿಸಿರುವ ಬಂಗಾರದ ಚೈ ಅನ್ನು ಶ್ವಾನದ ಕೊರಳಿಗೆ ಹಾಕಿ ಸಂಭ್ರಮಿಸಿದ್ದಾರೆ. ಬಂಧು ಮಿತ್ರರು, ಸ್ನೇಹಿತರು ಸೇರಿ ಸುಮಾರು 200ಕ್ಕೂ ಹೆಚ್ಚು ಜನ್ರಿಗೆ ಆಹ್ವಾನ ನೀಡಿ ಬಂದ ಜನ್ರಿಗೆಲ್ಲ ಚೌಚೌ ಬಾತ್(ಸಿರಾ, ಉಪ್ಪಿಟ್ಟು) ಟಿಫನ್ ಮಾಡಿಸಿ ಬರ್ತಡೆ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. ತಮ್ಮ‌ ಮೂವರು ಮಕ್ಕಳ ಜೊತೆಗೆ ನಾಲ್ಕನೇಯ ಮಗನಂತಿರುವ ಟೈಗರ್ ಶ್ವಾನಕ್ಕೆ ಎರಡೂವರೆ ವರ್ಷಗಳ ಹಿಂದೆ 15ಸಾವಿರ ಖರ್ಚು ಮಾಡಿ, ಗದಗ ದಿಂದ ಶ್ವಾನ ತಂದಿದ್ದ ಸಂಗಯ್ಯ ಪತ್ರಿ. ಕುಟುಂಬಸ್ಥರಿಗೆಲ್ಲ ಅಚ್ಚುಮೆಚ್ಚಿನ ಸದಸ್ಯನಾಗಿದ್ದು, ಎಲ್ಲರೊಂದಿಗೆ ಬೆರೆಯುವ ಶ್ವಾನ. ಕಳೆದ ವರ್ಷವೂ ಅದ್ಧೂರಿಯಾಗಿ ಬರ್ತಡೆ ಆಚರಿಸಿದ್ದ ಸಂಗಯ್ಯ ಪತ್ರಿ, ಕಳೆದ ವರ್ಷ 50ಗ್ರಾಂ ಚಿನ್ನದ ಸರ ಹಾಕಿ, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ರು. ಅಲ್ಲದೆ 500 ಜನ್ರಿಗೆ ಶಾವಿಗೆ ಪಾಯಸ, ಪೂರಿ, ಬಜಿ, ಸೇರಿದಂತೆ ವಿವಿದ ಖ್ಯಾದ್ಯಗಳ ಊಟ ಹಾಕಿಸಿದ್ದರು.