ಜಿಲ್ಲೆ

ಶ್ರೇಷ್ಠ ಶಿಕ್ಷಣ ತಜ್ಞ ರಾಧಾಕೃಷ್ಣನ್

ಔರಾದ್: ಭಾರತದ ಮಾಜಿ ರಾಷ್ಟಪತಿ, ಉಪರಾಷ್ಟಪತಿ, ಶಿಕ್ಷಕ ಹಾಗೂ ಭಾರತ ರತ್ನ ಪುರಸ್ಕೃತ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು ಎಂದು ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಅಜಯಕುಮಾರ ದುಬ್ದೆ ಹೇಳಿದರು.
ಸಂತಪುರ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಷ್ಯರು ಗುರುವನ್ನು ಗೌರವದಿಂದ ಕಾಣಬೇಕು. ಸಮಾಜ ಬದಲಾವಣೆಯಲ್ಲಿ ಗುರುವಿನ ಪಾತ್ರ ಅತಿ ಮುಖ್ಯ ಎಂದರು.
ವೈದ್ಯಾಧಿಕಾರಿ ಡಾ.ರೇಣುಕಾ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ. ಅದರ ಬದಲಾವಣೆಗೆ ಮುಖ್ಯ ಕಾರಣೀಕರ್ತರು ಶಿಕ್ಷಕರು ಎಂದರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಿದ್ಧರಾಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಗುರು ವೃಂದಕ್ಕೆ ಸನ್ಮಾನಿಸಿ ಗೌರವ ಸಲ್ಲಿಸಿದರು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿದರು. ಆಸ್ಪತ್ರೆ ಸಿಬ್ಬಂದಿ ಕಿರಣಕುಮಾರ ಬಿರಾದಾರ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಸಿದ್ದಾರೂಢ ಪಾಂಚಾಳ, ಈರಮ್ಮ ಕಟ್ಟಗಿ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ ಇತರರಿದ್ದರು.