ಜಿಲ್ಲೆ

ಶ್ರೇಷ್ಠ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಕೃಷ್ಣ ಕುಲಕರ್ಣಿ

ನಿಂಬರ್ಗಾ: ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ದಕ್ಷ ಮತ್ತು ಪರಿಣಾಮಕಾರಿ ಬೋಧನೆ ಮಾಡಿದ್ದರಿಂದಲೇ ಸಾಕಷ್ಟು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಶ್ರೀ ಶಂಕರಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆ ಕಾರ್ಯದರ್ಶಿ ನಿಂಗಣ್ಣ ಮಾಸ್ಟರ್ ಕಂಬಾರ ಹೇಳಿದರು.

ಮಾಡಿಯಾಳದ ಶ್ರೀ ಶಂಕರಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿವೃತ್ತ ಶಿಕ್ಷಕ ಅಶೋಕ ಐವರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಎಸ್‌ಎಫ್ ನಿವೃತ್ತ ಯೋಧ ಸಂಜಯಕುಮಾರ ಅಕ್ಕಲಕೋಟ, ಗ್ರಾಪಂ ಅಧ್ಯಕ್ಷ ಸುಭಾಷ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ಶಾಮರಾವ ಸಿಂಗೆ, ಮುಖ್ಯಗುರು ಗಣಪತಿ ಶಿಂದೆ, ಪ್ರಮುಖರಾದ ಸೂರ್ಯಕಾಂತ ರಾಮಜಿ, ಶ್ರೀಕಾಂತ ಕೌಲಗಿ, ರಮೇಶ ರಾಠೋಡ್, ಪ್ರಭು ಬಂಡಿ, ಪ್ರಭಾಕರ ಪೂಜಾರಿ, ಸಂಗಣ್ಣ ದುದ್ದಗಿ, ಪ್ರಭು ಕೌಲಗಿ, ಸುಭಾಷ ದುತ್ತರಗಿ, ಶಿವಶರಣಪ್ಪ ಮಡ್ಡಿತೋಟ, ಶಂಕರೆಪ್ಪ ನಾಯಕ, ಶಂಕರ ಜಾವಳಿ, ವಿರೂಪಕ್ಷಯ್ಯ ಮಠಪತಿ, ವಾಸಂತಿ ಕಟ್ಟಿಮನಿ, ವೀರೇಶ ಕಾಮಶೆಟ್ಟಿ, ಬಸವರಾಜ ಕುಂಬಾರ ಇತರರಿದ್ದರು.