ಚಿತ್ರದುರ್ಗ:ಜಿಲ್ಲೆಯಲ್ಲಿ ಆತ್ಮ ಯೋಜನೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ(ಮಹಿಳೆ ಮತ್ತು ಪುರುಷರು)ಗಳ ಆಯ್ಕೆಗೆ ಆಗಸ್ಟ್ 31ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಜಮೀನು ಇರುವ, ಕೃಷಿ,ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರೈತರು ಹೆಚ್ಚಿನ ವಿ ವರ ಮತ್ತು ಅರ್ಜಿಗೆ ರೈತ ಸಂಪರ್ಕ ಕೇಂದ್ರ,ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಈ ಹಿಂದೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದವರು,ಸರ್ಕಾರಿ ಸೇವೆಯಲ್ಲಿರಬಾರದು. ವಿಶ್ವವಿದ್ಯಾಲಯ,ಸರ್ಕಾರಿ ಸ್ವಯಂ ಸಂಸ್ಥೆಗಳ ನೌಕರರು,ಕುಟುಂಬ ಸದಸ್ಯರು ಹಾ ಗೂ ಕೃಷಿ ಮತ್ತು ಸಂಬಂಧಿತ ಇಲಾಖೆಗಳ ನಿವೃತ್ತ ತಾಂತ್ರಿಕ ನೌಕರರು,ಕುಟುಂಬದವರು ಅರ್ಜಿ ಹಾಕುವಂತಿಲ್ಲವೆಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.