ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪೇಂಕಾಕ್ ಸಿಲತ್ ಸಂಸ್ಥೆಯಿAದ ಕೊಪ್ಪಳದಲ್ಲಿ ನಡೆದ ಪೆಂಕಾಕ್ ಸಿಲತ್ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಶ್ರೀಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಫಾ ಇರಮ್ ಚಿನ್ನದ ಪದಕ ಗಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿಯು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದು. ತೆಲಂಗಾಣ ಅಸ್ಸಾಂ ಕಾಶ್ಮೀರ ಮತ್ತು ಒಡಿಶಾ ರಾಜ್ಯದ ಪ್ರತಿಸ್ಪರ್ಧಿಗಳನ್ನ ಸೋಲಿಸಿ ಬಂಗಾರದ ಪದಕವನ್ನು ಪಡೆದಿದ್ದಾರೆ. ೧೭ ವರ್ಷದ ಒಳಗಿನ ೪೮ಕೆಜಿ ವಿಭಾಗದಲ್ಲಿ ಈ ಸಾಧನೆಯನ್ನು ಮಾಡಿದ ವಿದ್ಯಾರ್ಥಿನಿ ಸಫಾ ಇರಮ್ ಅವರಾಗಿದ್ದಾರೆ. ಸಫಾ ಇರಮ್ ಚಿಕ್ಕಮಗಳೂರಿನ ವಿಜಯಪುರದ ಶೇಕ್ ಅಹಮದ್, ಬಿ.ಬಿ.ಆಯಿಷ ದಂಪತಿ ಪುತ್ರಿ. ಖೇಲೋ ಇಂಡಿಯಾ ೨೦೨೫ ಆವೃತ್ತಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಸಂಸ್ಥೆಯ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ವಿಜಯ ನಾಗೇಶ್, ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ಅಭಿನಂದಿಸಿದ್ದಾರೆ.