ಜಿಲ್ಲೆ

ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಕಾರ್ಯಕ್ರಮಗಳು ಸಂಪನ್ನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಎರಡು ದಿನಗಳ ಕಾರ್ಯಕ್ರಮಗಳು ಸಂಪನ್ನಗೊAಡಿವೆ. ಏಕಾದಶಿ, ದ್ವಾದಶಿ ದಿನಗಳಂದು ಭಕ್ತರಿಂದ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ಬುಧವಾರ ಮಧ್ಯಾಹ್ನ ಬಾಗಲಕೋಟೆಯಿಂದ ಸುಕ್ಷೇತ್ರ ಗಾಣಗಾಪುರಕ್ಕೆ ತೆರಳಿದರು.

ಏಕಾದಶಿ ದಿನವಾದ ಮಂಗಳವಾರ ನವನಗರದ ಉತ್ತರಾದಿ ಮಠದಲ್ಲಿ ಸಹಸ್ರಾರು ಸಂಖ್ಯೆ ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಿದ ಅವರು ನಂತರ ಎರಡು ದಿನಗಳ ಕಾಲ ನವನಗರದ ಶ್ರೀನಾಥ ಮಳಗಿ ಅವರ ನಿವಾಸದಲ್ಲಿ ಮೂಲರಾಮದೇವರ ಪೂಜೆ ಕೈಗೊಂಡರು. ಬುಧವಾರ ಬೆಳಗ್ಗೆ ಶ್ರೀರಾಮದೇವರ ಪೂಜೆ ನಂತರ ದ್ವಾದಶಿ ತೀರ್ಥ, ಪ್ರಸಾದಗಳನ್ನು ನೆರವೇರಿಸಲಾಯಿತು. ನಂತರ ನವನಗರದ ಸಕ್ರಿ ಹೈಸ್ಕೂಲ್‌ಗೆ ಭೇಟಿ ನೀಡಿ ಹಳೆ ಬಾಗಲಕೋಟೆಯ ಶ್ರೀವೆಂಕಟೇಶ್ವರ ದೇವಸ್ಥಾನ, ಕಿಲ್ಲಾ ಓಣಿಯ ಶ್ರೀಕೊತ್ತಲೇಶ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹಲವು ಭಕ್ತರ ಮನೆಗಳಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಮನಗೂಳಿ ಪರಿವಾರದ ಸೀತಾರಾಮ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿ ಭಕ್ತರಿಗೆ ಆಶಿರ್ವದಿಸಿದರು.

 
ಶ್ರೀಮಠದ ಶಾಖಾ ವ್ಯವಸ್ಥಾಪಕ ಪಂ. ಭೀಮಸೇನಾಚಾರ್ಯ ಪಾಂಡುರAಗಿ, ಪಂ.ಆನAದತೀರ್ಥಾಚಾರ್ಯ ನಾಗಸಂಪಗಿ, ಪಂ.ರಘೋತ್ತಮಾಚಾರ್ಯ ನಾಗಸಂಪಗಿ, ಪಂ.ಬಿAದುಮಾಧವಾಚಾರ್ಯ ನಾಗಸಂಪಗಿ, ಪಂ.ವಿಜಯೇAದ್ರಾಚಾರ್ಯ ನಾಗಂಸAಪಗಿ, ಪಂ. ಶಾಮಾಚಾರ್ಯ ಇಂಗಳೆ, ಪಂ. ವಿಜಯೇಂದ್ರಾಚಾರ್ಯ ಯತ್ನಟ್ಟಿ ಮತ್ತಿತರರು ಶ್ರೀಗಳ ಜತೆಗಿದ್ದರು.