ಬಾಗಲಕೋಟೆ ನಗರದ ಸಂಗ್ರಾಮ ಕ್ರಾಸ್ ಬಳಿ ಶ್ರೀಶೈಲಕ್ಕೆ ಹೊರಟಿರುವ ಭಕ್ತರಿಗೆ ಆಂಧ್ರಪ್ರದೇಶದ ಹೈದ್ರಾಬಾದ ಮೂಲದ ಬಿ.ವೆಂಕಟರೆಡ್ಡಿ ಅವರು ಜಿ.ವಿ.ಆರ್.ಚಾರಿಟೆಬಲ್ ಟ್ರಸ್ಟ್ ಮೂಲಕ ಸೇವೆ ನೀಡುತ್ತಿರುವುದು.  
ಜಿಲ್ಲೆ

ಶ್ರೀಶೈಲಕ್ಕೆ ಪಾದಯಾತ್ರಿಗಳಿಗೆ ಭಕ್ತಿಯ ಸೇವೆ

ಬಾಗಲಕೋಟೆ: ಅಸಂಖ್ಯೆ ಭಕ್ತ ಸಾಗರವನ್ನು ಹೊಂದಿರುವ ಆಂಧ್ರಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ. ಕೋಟೆನಗರಿ ಮೂಲಕ ಹಾಯ್ದು ಹೋಗುವ ಸಾವಿರಾರು ಭಕ್ತರಿಗೆ ಸೇವೆ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದೆ.

ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್, ವಿದ್ಯಾಗಿರಿ, ವಲ್ಲಭಾಯಿ ಚೌಕ, ಟೀಕಿನಮಠ, ಚರಂತಿಮಠದ ಶಿವಾನುಭವ ಮಂಟಪ, ಹಿಂದಿ ಹೈಸ್ಕೋಲ್, ಸಂಗಮ ಕ್ರಾಸ್ ಸೇರಿದಂತೆ ತೋಟಗಗಳಲ್ಲಿ ಹತ್ತಾರ ಸಂಘ, ಸಂಸ್ಥೆಗಳು, ಸಮಿತಿಗಳು, ಶ್ರೀಶೈಲ ಪಾದಯಾತ್ರಾ ಕಮಿಟಿಗಳು ಪಾದಯಾತ್ರೆಗಳಿಗೆ ಅನೇಕ ಬಗೆಯ ಸೇವೆಗಳನ್ನು ಒದಗಿಸಲಾಗುತ್ತಿದೆ.

ಆಂಧ್ರದಿ0ದ ಬಂದ ಸೇವಾಕರ್ತ...

ಸ್ಥಳೀಯರು ಸೇವೆ ನೀಡುವುದು ಹತ್ತಾರು ದಶಕಗಳಿಂದ ನಡೆದುಕೊಂಡು ಬಂದಿದೆ. ಇದೀಗ ಆಂಧ್ರಪ್ರದೇಶದ ಹೈದ್ರಾಬಾದ ಮೂಲದ ಬಿ.ವೆಂಕಟರೆಡ್ಡಿ ಜಿ.ವಿ.ಆರ್.ಚಾರಿಟೆಬಲ್ ಟ್ರಸ್ಟ್ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರಿಗೆ ಸೇವೆ ನೀಡುತ್ತಿರುವುದು ಗಮನ ಸೆಳೆದಿದೆ. ಸಂಗಮ ಕ್ರಾಸ್ ಬಳಿ ಬೃಹತ್ ಶಾಮೀಯಾನ ಹಾಕಿ ಉಚಿತವಾಗಿ ಅನೇಕ ಸೇವೆ ಒದಗಿಸಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಅರ್ಚನೆಗಾಗಿ ಪೂಜಾರಿಗಳನ್ನು ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಟೋಪಿಗಳ ವಿತರಣೆ, ಶಲ್ಲೆ, ಹಣ್ಣು, ಮಜ್ಜಿಗೆ, ಬಿಸ್ಕತ್, ಟೀ, ಮಸಾಲ ವಡೆ, ಸಿಹಿ ಬುಂದೆ, ಕಾರಾ ಬುಂದೆ, ಮಿರ್ಚಿ ಬಜಿ, ಬೊಂಡಾ ಪಾದಯಾತ್ರಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ವೈದ್ಯಕೀಯ ಸೇವೆ ಕೂಡಾ ನೀಡಲಾಗುತ್ತಿದೆ. ಮಲಗಲು ಸಜ್ಜಿತ ಬೆಡ್ ಹಾಗೂ ಪುರುಷರು, ಸಿöÃಯರಿಗೆ ಪ್ರತ್ಯೇಕ ಸ್ನಾನದ ವ್ಯವಸ್ಥೆ ಕಲ್ಪಿಸಿದ್ದಾರೆ. ಅನ್ಯ ರಾಜ್ಯದಿಂದ ಬಂದು ಇಲ್ಲಿನ ಭಕ್ತರಿಗೆ ಸೇವೆ ನೀಡುತ್ತಿರುವುದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.