ಜಿಲ್ಲೆ

ಶ್ರೀಲಂಕಾದಲ್ಲಿ ಅಂತರಾಷ್ಟ್ರೀಯ ನೃತ್ಯೋತ್ಸವ

ಹಾಸನ: ಚನ್ನರಾಯಪಟ್ಟಣ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ವತಿಯಿಂದ ಶ್ರೀಲಂಕಾದಲ್ಲಿ ನ.22ರಂದು 57ನೇ ಅಂತರಾಷ್ಟ್ರೀಯ ನೃತ್ಯೋತ್ಸವ ನಡೆಯಲಿದೆ ಎಂದು ನೃತ್ಯಗಾರ್ತಿ, ಅಕಾಡೆಮಿಯ ಕಾರ್ಯದರ್ಶಿ ಸ್ವಾತಿ ಪಿ.ಭಾರದ್ವಾಜ್ ತಿಳಿಸಿದರು.
ಶ್ರೀಲಂಕಾ ಸರ್ಕಾರದ ಸಹಕಾರದೊಂದಿಗೆ ಕೊಲಬೋದಲ್ಲಿರುವ ಬಂಡಾರನಾಯಕ ಮೆಮೋರಿಯಲ್ ಇಂಟರ್‌ನ್ಯಾಷನ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ರೀಲಂಕಾ ಪ್ರಧಾನಿ ದಿನೇಶ್ ಗುಣವರ್ಧನ ಅವರು ಉದ್ಘಾಟಿಸುವರು. ಭಾರತದ 8 ವಿಧದ ಶಾಸ್ತ್ರೀಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ, ದೇಶಾದ್ಯಂತ ವಿವಿಧ ಭಾಗಗಳಿಂದ 5 ರಿಂದ 60 ವಯಸ್ಸಿನ 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ನನ್ನ 1123ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2017ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯು ಶಾಸ್ತ್ರೀಯ ನೃತ್ಯಗಳನ್ನು ಪ್ರೋತ್ದಾಹಿಸಿ ಬೆಳೆಸುವ ಉದ್ದೇಶದಿಂದ ಭಾರತದಾದ್ಯಂತ 8 ಶಾಸ್ತ್ರೀಯ ನೃತ್ಯಗಳಲ್ಲಿ ಪರಿಣಿಸಿ ಹೊಂದಿದ 5 ರಿಂದ 70 ವರ್ಷದ ಕಲಾವಿದರನ್ನು ಒಂದೆಡೆ ಸೇರಿಸಿ ರಾಷ್ಟ್ರೀಯ ನೃತ್ಯೋತ್ಸವವನ್ನು ಈವರೆಗೆ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಿಕೊಂಡು ಬಂದಿದ್ದೇವೆ. ಇಲ್ಲಿಯವರೆಗೆ 10 ಸಾವಿರ ಮಕ್ಕಳಿಗೆ ವೇದಿಕೆ ಕಲ್ಪಿಸಿ ಕೊಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಅಧ್ಯಕ್ಷೆ ಕೆ.ಆರ್.ಅನಿತ, ರಾಜ್ಯ ಸಂಚಾಲಕ ರಮೇಶ್, ಪ್ರಕಾಶ್ ಹಾಜರಿದ್ದರು.