ಅಯೋದ್ಯ ಶ್ರೀರಾಮಮಂದಿರಕ್ಕೆ ಬೇಟಿ ನೀಡಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ 
ಜಿಲ್ಲೆ

ಶ್ರೀರಾಮ ಮಂದಿರಕ್ಕೆಮಾಜಿ ಶಾಸಕ ಚರಂತಿಮಠ ಭೇಟಿ

ಬಾಗಲಕೋಟೆ: ಮಾಜಿ ಶಾಸಕರು ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಂಗಳವಾರ ಅಯೋದ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರು.

ಹಿರಿಯರಾದ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಸಹಕಾರ್ಯದರ್ಶಿಗಳು ಹಾಗೂ ಅಯೋದ್ಯ ಶ್ರೀರಾಮ ಜನ್ಮಭೂಮಿ ಕಟ್ಟಡದ ಉಸ್ತುವಾರಿಯಾಗಿರುವ ಮಾನ್ಯ ಶ್ರೀ ಗೋಪಾಲ ಜೀ ಅವರಿಂದ ಶ್ರೀರಾಮ ಮಂದಿರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬರುವ ವರ್ಷ 2024 ಜನವರಿ 22ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ಭಗವಾನ ಶ್ರೀ ರಾಮ ದೇವರ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಲಿದ್ದಾರೆ.