ಔರಾದ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ತಾಲೂಕಿನ ಬೋಂತಿ ತಾಂಡಾ ನಿವಾಸದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಿಗೆ ದೇಣಿಗೆ ಚೆಕ್ ಹಸ್ತಾಂತರಿಸಲಾಯಿತು.
ಪ್ರಮುಖರಾದ ಹನುಮಂತರಾವ ಪಾಟೀಲ್, ಅಭಿಯಾನದ ಜಿಲ್ಲಾ ಪ್ರಮುಖ ಜೈಭೀಮ ಸೋಲಾಪುರೆ ಇತರರಿದ್ದರು.