ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾಗಿದ್ದಾರೆ. 
ಜಿಲ್ಲೆ

ಶ್ರೀರಾಮ ಟ್ರಸ್ಟ್ ಶಾಲೆಯ ಮಕ್ಕಳ ಸಾಧನೆ

ನಾಪೋಕ್ಲು: ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ವಿಜೇತರಾಗಿದ್ದಾರೆ. ಹೋಬಳಿ ಮಟ್ಟದ ಸ್ಪರ್ಧೆಗಳಲ್ಲಿ ಹಾಕಿ, ಕಾಲ್ಚೆಂಡು, ವಾಲಿಬಾಲ್, ಟೇಬಲ್ ಟೆನಿಸ್, ಚೆಸ್, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

3000 ಮೀ., 800 ಮೀ., 400 ಮೀ., 200 ಮೀ., 100 ಮೀ., 4್ಡ100 ಮೀಟರ್ ರಿಲೆ, ಎತ್ತರ ಜಿಗಿತ, ಗುಂಡು ಎಸೆತ, ದೂರ ಜಿಗಿತ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಜಿಲ್ಲಾ ಮಟ್ಟದ ಕಾಲ್ಚೆಂಡು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಐವರು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದಲ್ಲಿ 100 ಮೀ. ಓಟ, ಉದ್ದ ಜಿಗಿತ, ಮತ್ತು 4್ಡ100 ಮೀಟರ್ ರಿಲೆ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಹಾಕಿ ತಂಡವು ಜಿಲ್ಲಾ ಮಟ್ಟದಲ್ಲಿ ಪಾಲ್ಗೊಳ್ಳಲಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ತಿಳಿಸಿದ್ದಾರೆ.

ಈ ಸಂದರ್ಭ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿಬೋಪಯ್ಯ, ಉಪಾಧ್ಯಕ್ಷ ಹ್ಯಾರಿಮಂದಣ್ಣ, ಶಿಕ್ಷಕ ಕಾಳಯ್ಯ, ದೈಕ, ಶಿಕ್ಷಕಿ ಸರಿತಾ ಉಪಸ್ಥಿತರಿದ್ದರು.