ಶ್ರೀರಂಗಪಟ್ಟಣ: ತಾಲೂಕಿನ ವಿವಿಧೆಡೆ ಹಲವು ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ 1.45 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಡಿಸಿ ಆದೇಶದಂತೆ ಅಬಕಾರಿ ಪೊಲೀಸರು ಬುಧವಾರ ನಾಶಪಡಿಸಿದರು.
ಪಟ್ಟಣದ ಅಬಕಾರಿ ಇಲಾಖೆ ಕಚೇರಿಯಲ್ಲಿ ಪಾಂಡವಪುರ ಉಪವಿಭಾಗದ ಅಬಕಾರಿ ಉಪಅಧೀಕ್ಷಕ ಎನ್.ಟಿ.ಆನಂದ್ ಕುಮಾರ್ ನೇತೃತ್ವದಲ್ಲಿ 384.210 ಲೀ ಮದ್ಯ ಹಾಗೂ 26.630 ಲೀ ಬಿಯರ್‌ಅನ್ನು ನಾಶಪಡಿಸಲಾಯಿತು.
ಶ್ರೀರಂಗಪಟ್ಟಣ ವಲಯ ಅಬಕಾರಿ ನಿರೀಕ್ಷಕಿ ಎಚ್.ಡಿ.ರಮ್ಯಾ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ವೆಂಕಟರಮಣೇಗೌಡ, ಕಂದಾಯ ಇಲಾಖೆಯ ಕುಬೇರಪ್ಪ, ಪೊಲೀಸ್ ಇಲಾಖೆ ಎಎಸ್‌ಐ ಸಂಜೀವಯ್ಯ, ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ರಾಜಶೇಖರ್, ಶಿವಣ್ಣ ಸಿಬ್ಬಂದಿ ರಾಮು, ಯೋಗೇಶ್, ತನುಜಾ ಇತರರು ಇದ್ದರು.