ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಶ್ವಾಪುರ ಮಯೂರಿ ಎಸ್ಟೇಟ್ ಶ್ರೀ ಮಾಹಾಚಾರ್ಯ ವಿದ್ಯಾಲಯದಲ್ಲಿ ಜು.7ರಿಂದ 13ರವರೆಗೆ ನಿತ್ಯ ಸಂಜೆ 5.30ರಿಂದ ರಾತ್ರಿ 8 ಗಂಟೆಯವರೆಗೆ ಮುಂಬೈನ ಪ್ರಸಿದ್ಧ ಶ್ರೀಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ತಮ್ಮ ಶಿಷ್ಯ ಪಂ. ಪ್ರದ್ಯುಮ್ನಾಚಾರ್ಯರ ಷಷ್ಠಬ್ದಿ ನಿಮಿತ್ತ ಶ್ರೀಮದ್ಭಾಗವತ ಪ್ರವಚನ ನಡೆಸಿಕೊಡುವರು.
ಪಂ. ವಿದ್ಯಾಸಿಂಹಾಚಾರ್ಯ ಮಾಹುಲಿ, ಅನೇಕ ವಿದ್ವಾಂಸರನ್ನು ತಯಾರಿಸಿ ದೇಶದ ನಾನಾ ರಾಜ್ಯಗಳಲ್ಲಿ ಧರ್ಮ ಪ್ರಚಾರಕರಾಗಿ ನಿಯೋಜಿಸಿದ್ದಾರೆ. ಶ್ರೀಮದುತ್ತರಾದಿಮಠಾಧೀಶ ಶ್ರೀಸತ್ಯತ್ಮತೀರ್ಥರ ಪೂರ್ವಾಶ್ರಮದ ಗುರುಗಳಾಗಿದ್ದಾರೆ.