ಬೆಳಗಾವಿ: ಕೆಎಲ್‍ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಸಿ. ಪಾಲಕೊಂಡ ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ಶ್ರೀನಿವಾಸ ಪಾಲಕೊಂಡ ಅವರು ಕಾನೂನು ಅಧ್ಯಯನದಲ್ಲಿ “ಎ ಕ್ರಿಟಿಕಲ್ ಸ್ಟಡಿ ಆನ್ ಸೆಂಟೆನ್‍ಸಿಂಗ್ ಪಾಲಿಸಿ ಇನ್ ಇಂಡಿಯಾ ವಿತ್ ಸ್ಪೇಷಲ್ ರೆಫರನ್ಸ್ ಟು ಅಫೆನ್ಸಸ್ ರಿಲೇಟಿಂಗ್ ಟು ವುಮೆನ್” ಎಂಬ ವಿಷಯದ ಮೇಲೆ ಮಹಾಪ್ರಬಂದವನ್ನು ಸಾಧರಪಡಿಸಿದ್ದರು. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿವಿ ಪ್ರೊಫೆಸರ್ ಡಾ.ಜಿ.ಬಿ.ಪಾಟೀಲ ಮಾರ್ಗದರ್ಶನ ನೀಡಿದ್ದರು. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಡಾ.ಬಿ.ಜಯಸಿಂಹ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.