ಜಿಲ್ಲೆ

ಶ್ರೀನಿವಾಸಪುರ ಎಪಿಎಂಸಿ ಸಮಸ್ಯೆಗಳ ಆಗರ : ಕಾರ್ಮಿಕರ ಸಂಕಷ್ಟಕ್ಕಿಲ್ಲ ಪರಿಹಾರ

ಸಿ.ಎಸ್​.ವಿಶ್ವನಾಥಶಾಸ್ತ್ರಿ ರಾಯಲ್ಪಾಡು

ರಾಜ್ಯದಲ್ಲಿಯೇ ಅತಿ ದೊಡ್ಡ ಮಾವು ಮಾರುಕಟ್ಟೆ ಎಂದು ಗುರುತಿಸಿಕೊಂಡಿರುವ ಶ್ರೀನಿವಾಸಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇ.20 ಮಾವು ಮಂಡಿಗಳು ಪ್ರಾರಂಭಗೊಂಡಿದ್ದು, ಮಾವು ವಹಿವಾಟು ಪ್ರಾರಂಭಗೊಂಡಿದೆ. ಆರಂಭದಲ್ಲಿಯೇ ಮಾರುಕಟ್ಟೆಗೆ ಬಿರುಗಾಳಿ ಮಳೆಗೆ ಬಿದ್ದಿರುವ ಮಾವು ಬರುತ್ತಿರುವುದರಿಂದ ಗುಣಮಟ್ಟದ ಮಾವಿಗೆ ಬೆಲೆಯಿಲ್ಲದಂತಾಗಿದ್ದು, ರೈತರು ಗುಣಮಟ್ಟದ ಮಾವು ತರಲು ಮೀನಮೇಷ ಎಣಿಸುತ್ತಿದ್ದಾರೆ.

ಮಳೆಗೆ ಬಿದ್ದ ಮಾವು 4&5 ರೂ.ಗೆ ಮಾರಾಟವಾಗುತ್ತಿದ್ದು, ಗುಣಮಟ್ಟದ ಮಾವು ಬೆನೀಶಾ ಜ್ಯೂಸ್​ಗೆ ಹೋಗುವ ಕಾಯಿ 30 ರೂ., ತಿನ್ನಲು ರ್ತಾಗುವ ಕಾಯಿ 36&40 ರೂ.ಗೆ ಮಾರಾಟವಾಗುತ್ತಿದೆ. ತೋತಾಪೂರಿ ಬೆಳೆ ಜ್ಯೂಸ್​ಗಾಗಿ 13ರೂ.ಗೆ ಮಾರಾಟವಾದರೆ, ತಿನ್ನಲು ರಫ್ತಾಗುವ ಕಾಯಿ 16 &20 ರೂ.ವರೆಗೆ ತಲುಪಿದೆ. ಬಾದಾಮಿ ಜ್ಯೂಸ್​ಗೆ ಹೋಗುವ ಕಾಯಿ 35ರೂ. ಇದ್ದರೆ, ತಿನ್ನಲು ರ್ತಾಗುವ ಕಾಯಿ 40&50 ರೂ.ಗೆ ಮಾರಾಟವಾಗುತ್ತಿದೆ. ರಾಜಗೀರ ಜ್ಯೂಸ್​ಗೆ 17 ರೂ., ತಿನ್ನಲು 31&32 ರೂ.ಗಳಿಗೆ ಮಾರಾಟವಾಗುತ್ತಿದೆ.

ಈ ವರ್ಷ ಫಸಲು ಕಡಿಮೆ ಇದ್ದು, ಇರುವ ಕಾಯಿ ಬಿರುಗಾಳಿ ಮಳೆಗೆ ಉದುರಿರುವುದರಿಂದ ಧಾರಣೆ ಅಷ್ಟೇನೂ ಸಮಾಧಾನ ತಂದಿಲ್ಲ. ಉತ್ತಮ ಫಸಲು ಬಂದಿದ್ದರೆ ಇದೇ ಧಾರಣೆ ಇದ್ದರೂ ರೈತ ಖುಷಿ ಪಡಬಹುದಾಗಿತ್ತು. ಫಸಲು ಕುಸಿದಿರುವುದು, ಬಿರುಗಾಳಿ ಮಳೆಗೆ ಇರುವ ಫಸಲು ಕಳೆದುಕೊಂಡಿರುವುದರಿಂದ ರೈತನಿಗೆ ಖುಷಿಯೂ ಅಲ್ಲ, ನಷ್ಟವೂ ಅಲ್ಲ ಎನ್ನುವ ಸ್ಥಿತಿಯಾಗಿದೆ ಎಂಬುದು ರೈತರ ಮಾತಾಗಿದೆ.

ಕೂಲಿ ಕಾರ್ಮಿಕರಿಗಿಲ್ಲ ಸೌಲಭ್ಯಗಳು: ವಹಿವಾಟಿಗಾಗಿ 3 ತಿಂಗಳ ಅವಧಿಗೆ ದೇಶದ ನಾನಾ ಭಾಗಗಳಿಂದ ಕೂಲಿ ಕಾರ್ಮಿಕರು ಲೋಡ್​ ಮತ್ತು ಅನ್​ ಲೋಡ್​ ಮಾಡಲು ಎಪಿಎಂಸಿ ಆವರಣಕ್ಕೆ ಆಗಮಿಸುತ್ತಾರೆ. ಕಾರ್ಮಿಕರಿಗಾಗಿ ಆವರಣದಲ್ಲಿ ಶ್ರಮಿಕ ಭವನ, ಶೌಚಗೃಹಗಳು, ಕುಡಿಯುವ ನೀರಿನ ವ್ಯವಸ್ಥೆಯನ್ನು ಎಪಿಎಂಸಿ ಆಡಳಿತ ಮಂಡಳಿ ಕಲ್ಪಿಸಬೇಕು. ಇಲ್ಲವೇ ಮಂಡಿ ಮಾಲೀಕರೇ ಕಾರ್ಮಿಕರಿಗೆ ಒದಗಿಸಬೇಕು. ಪ್ರತಿ ಸುಗ್ಗಿಯಲ್ಲಿಯೂ ಈ ಬಗ್ಗೆ ಸಂ ಸಂಸ್ಥೆಗಳು ಹೋರಾಟ ಮಾಡುತ್ತಿದ್ದರೂ, ಎಪಿಎಂಸಿ ಮತ್ತು ಮಂಡಿ ಮಾಲೀಕರು ರ್ನಿಲಕ್ಷ$್ಯ ವಹಿಸುತ್ತಿದ್ದಾರೆ.

ಶೌಚಗೃಹಕ್ಕಾಗಿ ಪರದಾಟ: ಶ್ರೀನಿವಾಸಪುರದಲ್ಲಿ 150 ಮಾವು ಮಂಡಿಗಳಿದ್ದು, ಪ್ರತಿ ಮಂಡಿಗಳಲ್ಲಿ ಕನಿಷ್ಠ 30 ಜನ ವಲಸೆ ಕೂಲಿ ಕಾರ್ಮಿಕರು, ಮಕ್ಕಳು, ಮಹಿಳೆಯರೊಂದಿಗೆ ಬಂದು ವ್ಯಾಪಾರ ಮುಗಿಯುವವರೆಗೂ ಇಲ್ಲೇ ತಂಗಿರುತ್ತಾರೆ. ಮಂಡಿ ಒಳಗೆ ಮಾವಿಗೆ ಹಾಕಿದ ಹುಲ್ಲಿನ ಮೇಲೆಯೇ ಇವರ ವಾಸ. ಅಲ್ಲಿಯೇ ಅಡುಗೆ, ಸ್ನಾನ, ಮಾಡುತ್ತಾರೆ. ಆದರೆ ರಾತ್ರಿ ವೇಳೆ ಶೌಚಗೃಹಕ್ಕಾಗಿ ಪರದಾಡುವ ಚಿಂತಾಜನಕ ಸ್ಥಿತಿ ಮಹಿಳೆಯರದ್ದಾಗಿದೆ. ಆವರಣದಲ್ಲಿರುವ ಶೌಚಗೃಹಗಳು ಕಾಟಾಚಾರಕ್ಕಿವೆ. ಇದ್ದರೂ ಸರಿಯಾದ ನಿರ್ವಹಣೆ ಇಲ್ಲ. ಕಾರ್ಮಿಕರಿಗಾಗಿಯೇ ಇರುವ ಕಾರ್ಮಿಕ ಭವನಗಳು ಎಪಿಎಂಸಿ ಪಾಲಾಗಿವೆ. ಈ ಕುರಿತು ಧ್ವನಿ ಎತ್ತುವವರೇ ಇಲ್ಲವಾಗಿದೆ.

ಎಪಿಎಂಸಿ ಆವರಣಲ್ಲಿ ಶೌಚಗೃಹಗಳನ್ನು ಒಂದೇ ಕಡೆ ನಿರ್ಮಿಸಲಾಗಿದ್ದು, ಶಿವಣ್ಣ ಎಂಬುವವರಿಗೆ ನಿರ್ವಹಣೆ ನೀಡಿದ್ದು, 2 ದಿನಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ಶೌಚಗೃಹ ಆರಂಭವಾಗಿದೆ. ಶ್ರಮಿಕ ಭವನದಲ್ಲಿ 2 ವರ್ಷಗಳ ಹಿಂದೆ ಕಾರ್ಮಿಕರು ಜಗಳ ಮಾಡಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಯಾರೂ ಬರುತ್ತಿಲ್ಲ. ಇಲ್ಲಿ ಕೆಲಸ ಮಾಡುವವರು ಬೇರೆ ರಾಜ್ಯದವರೇ ಹೆಚ್ಚಿದ್ದು, ಒಂದೆಡೆ ಇರಲು ಆಗುತ್ತಿಲ್ಲ. ಮುಖ್ಯವಾಗಿ ಮಂಡಿ ಮಾಲೀಕರೇ ಶ್ರಮಿಕ ಭವನಕ್ಕೆ ಕಾರ್ಮಿಕರನ್ನು ಬಿಡುತ್ತಿಲ್ಲ. ಉಮಾ ಎಪಿಎಂಸಿ ಕಾರ್ಯದರ್ಶಿ