ಚಾಮರಾಜನಗರ:ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಹಿನ್ನೆಲೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.
ನಗರದ ಹೃದಯ ಭಾಗದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಜು.3 ರಂದು ಆಷಾಢ ರಥೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ಜೂ. 26 ರಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿವೆ. ಮಂಗಳವಾರ ಅಭಿಜಿನ್ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಭೇರಿ ತಾಡನಾ ನಂತರ ಶಿಭಿಕಾರೋಹಣೋತ್ಸವ ನಡೆಯಿತು. ರಥದ ಬೀದಿಯಲ್ಲಿ ಧ್ವಜ ಹಾಗೂ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಅಂಕುರಾರ್ಪಣ ಪೂರ್ವಕ ವೃಷಭಾಧಿವಾಸ ಹಗಲು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಜೂ.28 ರಂದು ಚಂದ್ರಮಂಡಲಾರೋಹಣೋತ್ಸವ, 29 ರಂದು ಅನಂತ ಪೀಠಾರೋಹಣೋತ್ಸವ, 30 ರಂದು ಪುಷ್ಪಮಂಟಪಾರೋಹಣೋತ್ಸವ, ಜು.1 ರಂದು ವೃಷಭಾರೋಹಣೋತ್ಸವ, 2 ರಂದು ವಸಂತೋತ್ಸವ ಪೂರ್ವಕ ಗಜಾವಾಹನೋತ್ಸವ ನಡೆಯಲಿದೆ. ಜು.3 ರಂದು ಮಧ್ಯಾಹ್ನ 12 ರಿಂದ 1 ಗಂಟೆ ಒಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಮಹಾರಥೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಹಾಗೂ ಆಗಮಿಕ ದರ್ಶನ್, ರಾಮಕೃಷ್ಣ ದೀಕ್ಷೀತ್, ನಾಗರಾಜ ದೀಕ್ಷಿತ್, ಅನಿಲ್ ಕುಮಾರ್ ದೀಕ್ಷಿತ್, ಉತ್ಸವ ಸಮಿತಿಯ ಸದಸ್ಯರು ಭಾಗವಹಿಸಿದ್ದರು.