ಬಾಗಲಕೋಟೆ: ನಾವೆಲ್ಲರೂ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೈತಿಕ ಬೆಂಬಲಕ್ಕಾಗಿ ಬಂದಿದ್ದೇವೆ. ಇಡೀ ಸಮಾಜ, ನಾವು ಅಖಂಡ ಬಂಡೆಯAತೆ ನಿಂತಿದ್ದೇವೆ. ಕೆಲವೇ ದಿನಗಳಲ್ಲಿ ಬಾಗಲಕೋಟೆ, ಹುಬ್ಬಳ್ಳಿ ಅಥವಾ ಧಾರವಾಡ ಯಾವುದಾದರೂ ಒಂದು ಸ್ಥಳದಲ್ಲಿ ಸಮಾಜದ ಮುಖಂಡರ ಸಭೆ ಮಾಡಿ ಮುಂದಿನ ನಡೆ ಪ್ರಕಟಿಸುತ್ತೇವೆ. ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದೇವೆ ಮುಂದಿನ ಸಭೆಯಲ್ಲಿಯೇ ಎಲ್ಲವನ್ನೂ ತಿಳಿಸುತ್ತೇವೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸೋಮವಾರ ಕೂಡಲಸಂಗಮ ಯಾತ್ರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾಮೀಜಿ ಪೀಠಾಽಪತಿಯಾದ ನಂತರ ಸಮಾಜ ಸಂಘಟನೆ, ಹೋರಾಟ ಮಾಡಿದ್ದನ್ನು ಯಾರು ಪಂಚಮಸಾಲಿಗಳು ಮರೆಯುವದಿಲ್ಲ. ಸಮಾಜದ ಶಕ್ತಿಯನ್ನು ರಾಜ್ಯ ಸರ್ಕಾರಕ್ಕೆ, ದೇಶಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಮಾಡಿಲ್ಲ. ನೈತಿಕ ಬೆಂಬಲಕ್ಕೆ ಬಂದಿದ್ದೇವೆ. ಯತ್ನಾಳ ಬರುವವರಿದ್ದರು, ಜ್ವರ ಬಂದಿದ್ದರಿAದ ಬಂದಿಲ್ಲ.
ಸಮಾಜದ ಎಲ್ಲ ಶಾಸಕರು, ಗಣ್ಯರು ಸೇರಿಕೊಂಡು ಮುಂದಿನ ದಿನದಲ್ಲಿ ಸೂಕ್ತ ತೀರ್ಮಾಣ ಮಾಡುತ್ತೇವೆ. ಜಗದ್ಗುರುಗಳಿಗೂ, ಟ್ರಸ್ಟಿಗೂ ಯಾವುದೇ ಸಂಬAದವಿಲ್ಲ. ಅವರನ್ನು ಹೊರಹಾಕುವ ಅಽಕಾರವು ಇಲ್ಲ. ಸಮಾಜ ಬಾಂಧವರು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ನಿನ್ನೆ, ಇಂದು, ನಾಳೆ ಯಾವತ್ತೂ ಪ್ರಪ್ರಥಮ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.
ಕೂಡಲಸಂಗಮದಲ್ಲಿ ಪರ್ಯಾಯ ಪೀಠ ಮಾಡುತ್ತೀರಾ ಎಂಬ ಪ್ರಶ್ನೆಗೆ ಇದು ಕೇವಲ ಒಬ್ಬರು, ಇಬ್ಬರೂ ಕೂಡಿಕೊಂಡು ತೆಗೆದುಕೊಳ್ಳುವ ನಿರ್ಣಯ ಆಗಬಾರದು. ಆ ಕಾರಣಕ್ಕಾಗಿ ಸ್ವಲ್ಪ ದಿನದಲ್ಲಿ ಸಮಾಜ ಮುಖಂಡರ ದೊಡ್ಡ ಸಭೆ ಕರೆಯಲಾಗುತ್ತಿದೆ. ಸಮಾಜದ ಬಗ್ಗೆ ಕಾಳಜಿ, ಅಭಿಮಾನ ಇರುವವರು ಪಕ್ಷಾಂತೀತವಾಗಿ ಬರಬೇಕು ಎಂದು ಹೇಳಿದರು.
ಪಂಚಮಸಾಲಿ ಹಿಂದೂ ಪೀಠನಾ ಲಿಂಗಾಯತ ಪೀಠನಾ ಎಂಬ ಪ್ರಶ್ನೆಗೆ ಯಾರಿಗೂ ಶಂಕೆ ಬೇಡ. ಹಿಂದು ಎಂಬ ಶಬ್ದ ಪರಂಪರಾಗತವಾಗಿ ಬಂದಿದೆ. ನಮ್ಮ ಧರ್ಮ ಹಿಂದೂ ಉಪಜಾತಿ ಅವರವರ ಕಾಲಂನಲ್ಲಿ ಬೇಕಾದನ್ನು ಬರೆಯಿಸಲಿ. ಪಂಚಮಸಾಲಿ ಪೀಠ ಒಂದೇ, ಹಿಂದು ಎನ್ನುವವರು ಹಿಂದು ಅಂದುಕೊಳ್ಳಲಿ, ವೀರಶೈವ ಎನ್ನುವವರು ವೀರಶೈವ ಅಂದುಕೊಳ್ಳಲಿ, ಲಿಂಗಾಯತ ಎನ್ನುವವರು ಲಿಂಗಾಯತ ಅಂದುಕೊಳ್ಳಲಿ, ಅವರವರ ಭಕುತಿಗೆ, ಭಾವಕ್ಕೆ ಅನುಗುಣವಾಗ ಅಂದುಕೊಳ್ಳಲಿ ಎಂದು ತಿಳಿಸಿದರು.
ಸಮಾಜದ ಮಕ್ಕಳ ವಿದ್ಯಾಭ್ಯಾಸ, ನೌಕರಿಗಾಗಿ ಮೀಸಲಾತಿ ಕೊಡಿಸಬೇಕೆಂಬ ಸ್ಪಷ್ಟ ಉದ್ದೇಶಕ್ಕೆ ಬದ್ದರಾಗಿದ್ದಾರೆ, ನಾವು ಬೆಂಬಲವಾಗಿ ನಿಂತಿದ್ದೇವೆ. ಮುಂದೆ ಪರಮಾತ್ಮ, ಕೂಡಲಸಂಗಮನ ಆಶೀರ್ವಾದ ಇದ್ದರೆ ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ರೆ, ಪುನ: ಪ್ರಯತ್ನಿಸಿ ಶ್ರೀಗಳಿಗೆ ಒಂದು ವಿಜಯಪತಾಕೆ ಮಾಲೆಯನ್ನು ಹಾಕಿಕೊಡಲಿಕ್ಕೆ ನಾವೆಲ್ಲರೂ ಬದ್ದರಿದ್ದೇವೆ ಎಂದರು.
ಕಾಶಪ್ಪನವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಿಡಿ ಬಗ್ಗೆ ಮಾತನಾಡಿದ್ದರೆ ಎಂಬ ಪ್ರಶ್ನೆಗೆ ಮನಸ್ಸಿಗೆ ಬಂದAತೆ ಮಾತನಾಡೋದಲ್ಲ, ಇದೇ ಸ್ವಾಮೀಜಿಯನ್ನು ಟಿಕೆಟ್‌ಗಾಗಿ ಅಡ್ಡಾಡಿಸಿದರಲ್ಲ. ಸಮಾಜದ ವ್ಯಕ್ತಿಯ ಗೌರವ ಕಳೆಯುವ ಕೆಲಸವನ್ನು ಯಾರು ಮಾಡಬಾರದು. ನಾವು ಯಾರ ಗೌರವ ಕಡಿಮೆ ಮಾಡಲು ಹೋಗುತ್ತೇವೆ, ಆವಾಗ ನಮ್ಮ ಗೌರವವೇ ಕಡಿಮೆ ಆಗುವುದು. ವ್ಯಕ್ತಿಗಿಂತ ಸಮಾಜ ದೊಡ್ಡದು ಎಂಬುದರನ್ನು ಅರಿಯಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಅರವಿಂದ ಮಂಗಳೂರ ಮುಂತಾದವರು ಇದ್ದರು.