ಶ್ಸೀಕ್ಷೇತ್ರ ಸಿದ್ದೇಶ್ವರ ದೇವರು, ಮದ್ಲೂರು.. 
ಜಿಲ್ಲೆ

ಮದ್ಲೂರಿನ ಶ್ರೀಕ್ಷೇತ್ರ ಸಿದ್ದೇಶ್ವರ ದೇವರ ಶ್ರಾವಣ ಮಹೋತ್ಸವ

Rayanna R C

ಬೆಳಗಾವಿ: ಸವದತ್ತಿ ತಾಲೂಕಿನ ಮದ್ಲೂರಿನ ಸಿದ್ದೇಶ್ವರ ದೇವಸ್ಥಾನದ ಶ್ರಾವಣ ಮಾಸದಲ್ಲಿ ನಿತ್ಯವೂ ನಡೆಯುತ್ತಲಿದೆ. ಭಕ್ತಾಧಿಗಳು ಪ್ರತಿದಿನ ಮುಂಜಾನೆಯ 5 ಗಂಟೆಯಿಂದ ಕೊರನಾರ ಬಾವಿ ನೀರು ಸ್ಥಾನ ಮಾಡಿ ಊರಿನ ಭಜನಾ ಮಂಡಳಿಯವರು ಊರಿನ ತುಂಬಾ ಪಾದಯಾತ್ರೆ ಮಾಡಿ ಶ್ರಾವಣ ಮಾಸ ಮುಗಿಯುವವರಿಗೆ ನಿರಂತರವಾಗಿ ನಡೆಸಿಕೊಂಡು ಹೋಗುವ ಸಂಪ್ರದಾಯವಿದೆ. ಶ್ರೀ ಸಿದ್ದೇಶ್ವರ ದೇವಸ್ಥಾನ ಪ್ರತಿದಿನ ಊರಿನ ಜನರು ಅಭಿಷೇಕ ಮಾಡುವುದು ಭಜನೆ ಸಾರ್ವಜನಿಕರನ್ನು ಕರೆದು ಮಹಾ ಪ್ರಸಾದ ವಿವಿಧ ರೀತಿಯಲ್ಲಿ ಅಡಿಗೆ ಮಾಡಿ ಬಡಿಸುವ ಕಾರ್ಯವನ್ನು ಮುಂದುವರಿಸಿಕೊಂಡು ಮುಂದಿನ ಜನರಿಗೆ ತಿಳಿಸಿಕೊಡುವ ಮುಕಾಂತರ ಊರಿನ ಜನರು ಶ್ರೀ ಸಿದ್ದೇಶ್ವರ ದೇವಸ್ಥಾನದ ಸಾಂಪ್ರದಾಯಿಕ ಪದ್ದತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ದೇವಾಲಯದ ಪ್ರತಿ ದಿನ ಮುಂಜಾನೆ ಭಕ್ತಾಧಿಗಳೆಲ್ಲರೂ ಕೊರನಾರ ಬಾವಿಯಿಂದ( ಶರಣರ ಬಾವಿ) ತನ್ನಿರಿನ ಸ್ಥಾನ ಮಾಡಿ, ಊರಿನ ಹತ್ತು ಹಲವು ದೇವರಗೆ ಹೋಗಿ ಪೂಜೆಯ ಸಲ್ಲಿಸುವುದು ವಾಡಿಕೆಯಿದೆ. ಇದು ಒಂದು ತಿಂಗಳ ಕಾಲ ನಿರಂತರವಾಗಿ ಪ್ರತಿದಿನ ನಡೆಯುತ್ತದೆ. ಇಲ್ಲಿ ಸಿದ್ದೇಶ್ವರ ಕೊಳದಲ್ಲಿ ಪ್ರಕೃತಿ ಸೌಂದರ್ಯವನ್ನು ನೋಡುಗರನ್ನು ಮನ ಸೆಳೆಯುತ್ತದೆ. ದಿನಾಲೂ ಸಾಕಷ್ಟು ಭಕ್ತರು ಸಿದ್ದೇಶ್ವರ ದರ್ಶನಕ್ಕೆ ಆಗಮಿಸುತ್ತಾರೆ. ಈ ಗ್ರಾಮದಲ್ಲಿ ಜನರು ಹೇಳುವ ಪ್ರಕಾರ 101 ಬಾವಿ 101 ದೇವಸ್ಥಾನದ ದರ್ಶನ ನಮ್ಮೂರಲ್ಲಿ ಪಡೆಯಬಹುದೆಂದು ಗ್ರಾಮಸ್ಥರ ಹೇಳುತ್ತಾರೆ. ಈ ಪ್ರಕೃತಿಯ ಸೌಂದರ್ಯವನ್ನು ಗ್ರಾಮದ ಸುತ್ತಮುತ್ತಲಿನ ಜನರು ಪ್ರವಾಸಿತಾಣ ಎಂದು ಅತ್ಯಂತ ಹೆಮ್ಮೆಯ ಖುಷಿಯಿಂದ ಆಗಮಿಸುವ ದೃಶ್ಯಗಳು ಸಾಮಾನ್ಯವಾಗಿವೆ.