ಚಿತ್ರದುರ್ಗ: ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ನೂತನ ಶ್ರೀಕೃಷ್ಣ ವೃತ್ತವನ್ನು ಶನಿವಾರ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೋಕಾರ್ಪಣೆಗೊಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಮುಖಂಡರಾದ ಡಿ.ಟಿ.ಶ್ರೀನಿವಾಸ್, ಕೆ.ಸಿ.ನಾಗರಾಜ್, ಎನ್.ಡಿ.ಕುಮಾರ್, ಪ್ರಕಾಶ್ ರಮಾನಾಯ್ಕ, ಯಾದವ ಸಮುದಾಯದ ಮುಖಂಡರಾದ ಕದುರಪ್ಪ, ಹರೀಶ್ ಪೂಜಾರ್, ಮಾರುತಿ, ತಿಮ್ಮೇಶ್, ಕೇಶವ್, ನಾಗರಾಜ್, ತಿಪ್ಪೇಸ್ವಾಮಿ, ಏಕಾಂತ, ವಿರುಪಾಕ್ಷ, ಕೃಷ್ಣಮೂರ್ತಿ, ಪ್ರಕಾಶ್ ಇತರರಿದ್ದರು.