ಚಿಕ್ಕಮಗಳೂರು: ನವರಾತ್ರಿ ಕೊನೆಯ ದಿನವಾದ ಗುರುವಾರ ವಿಜಯದಶಮಿ ಅಂಗವಾಗಿ ಶ್ರೀಕಾಳಿಕಾಂಬ ಸೇವಾ ಸಮಿತಿಯಿಂದ ನಗರದ ರಾಮನಹಳ್ಳಿ ಸಮೀಪದ ರತ್ನಗಿರಿ ಬೋರೆಯಲ್ಲಿ ಶ್ರೀ ಕಾಳಿಕಾಂಬ ದೇವಿಗೆ ವಿಶೇಷಪೂಜೆ ಹಾಗೂ ವಿವಿಧ ಹೋಮಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ ೬.೩೦ಕ್ಕೆ ಧ್ವಜಾರೋಹಣ, ದೇವತಾ ಪ್ರಾರ್ಥನೆ, ಸಂಕಲ್ಪ ಗಣಪತಿಪೂಜೆ, ಪುಣ್ಯಾಹ, ದೇವನಾಂದಿ, ಕಳಸ ಸ್ಥಾಪನೆ, ವಿವಿಧ ಹೋಮಗಳು ಜರುಗಿದವು, ಮಧ್ಯಾಹ್ನ ೧೨ ಗಂಟೆಗೆ ಪೂರ್ಣಾಹುತಿ, ಅಷ್ಟಾವದಾನಸೇವೆ, ಶಮಿಪೂಜೆ, ಪುಷ್ಪಾಲಂಕೃತ ಉಯ್ಯಾಲೆ ಉತ್ಸವ, ಮಹಾಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಪೂಜಾ ವಿದಿವಿಧಾನ ಕೈಂಕರ್ಯಗಳನ್ನು ಪುರೋಹಿತರಾದ ಪದ್ಮನಾಭ್ ಹಾಗೂ ಪೂರ್ವಾಚಾರ್ ಇವರ ಸಹಯೋಗದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ವಿಜಯದಶಮಿ ಹಬ್ಬವು ಒಳ್ಳೆಯತನ ಮತ್ತು ಸದ್ಗುಣಗಳ ಹಾದಿಯಲ್ಲಿ ನಡೆಸಲು ನಮಗೆ ಸ್ಪೂರ್ತಿ ನೀಡುತ್ತಿದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷದಿAದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಭೀಷ್ಮಾಚಾರ್, ಉಪಾಧ್ಯಕ್ಷ ಜಗದೀಶ್, ರುದ್ರಯ್ಯಾಚಾರ್, ಕಾರ್ಯದರ್ಶಿ ಎಂ.ಕೆ.ಉಮೇಶ್, ಸಹ ಕಾರ್ಯದರ್ಶಿ ದಕ್ಷಿಣಮೂರ್ತಿ, ಖಜಾಂಚಿ ಅರುಣ್, ನಿರ್ದೇಶಕರಾದ ಉಮಾಶಂಕರ್, ರತೀಶ್, ಚಂದ್ರಶೇಖರ್, ಬಾಲಕೃಷ್ಣ, ಅಶೋಕಾಚಾರ್, ಗಂಗಾಧರ್ ಮತ್ತಿತರರು ಇದ್ದರು.