ಜಿಲ್ಲೆ

ಶ್ರೀಕರಿಮಾರಿಯಮ್ಮ ದೇಗುಲ ವಾರ್ಷಿಕೋತ್ಸವ ಸಂಪನ್ನ

ಸೋಮವಾರಪೇಟೆ: ಬಜೆಗುಂಡಿಯ ಶ್ರೀಕರಿಮಾರಿಯಮ್ಮ ದೇವಾಲಯದ 28ನೇ ವಾರ್ಷಿಕೋತ್ಸವ ಮಂಗಳವಾರ ಸಂಪನ್ನಗೊಂಡಿತು.

ಸೋಮವಾರ ನವಕ ಪ್ರಧಾನ ಕಲಾಕಲಶ ಪ್ರತಿಷ್ಠೆ, ಶ್ರೀ ಕರಿಮಾರಿಯಮ್ಮ ದೇವರಿಗೆ ಕಲಾತತ್ವಾಧಿವಾಸ ಹೋಮ, ಕಲಾಕಲಶಾಭಿಷೇಕ, ಮಹಾಪೂಜೆ ನೆರವೇರಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆ ಜರುಗಿತು. ಕರಗವನ್ನು ಗ್ರಾಮದ ಮಣಿ, ಮಣಿಕಂಠ ಮತ್ತು ಸಂದೀಪ ಅವರು ಹೊತ್ತು ದೇವಿಗೆ ಸೇವೆ ಸಲ್ಲಿಸಿದರು.ಮಂಗಳವಾರ ಬೆಳಗ್ಗೆ 6 ಗಂಟೆಗೆ ದೇವಿಗೆ ಅಲಂಕಾರ, ಪೂಜೆ ನಂತರ ಮಹಾಮಂಗಳಾರತಿ ನೆರವೇರಿತು.

ನಂತರ ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.