ಜಿಲ್ಲೆ

ಶ್ರೀ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭೆ ನಾಗರಾಜು ಅಭಿಮತ

ಹಾಸನ: ಕೆಲಸದ ಜತೆಗೆ ರಾತ್ರಿ ಒಳ್ಳೆಯ ನಿದ್ದೆ ಮಾಡಿದರೆ ಮತ್ತೆ ನಾಳೆ ಕೆಲಸ ಮಾಡಲು ಎನರ್ಜಿ ಸಿಗುತ್ತದೆ ಎಂದು ಆದಿ ಗ್ಯಾಸ್ ಯಾತ್ರಾ ಮುಖ್ಯಸ್ಥ ನಾಗರಾಜು ಹೇಳಿದರು.
ನಗರದ ಎವಿಕೆ ಕಾಲೇಜು ಸಭಾಂಗಭಣದಲ್ಲಿ ಭಾನುವಾರ ನಡೆದ ಶ್ರೀ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲಸ ಇಲ್ಲದ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುವ ಬದಲು ಉತ್ತಮ ಜಾಗಕ್ಕೆ ಪ್ರವಾಸ ಮಾಡಿದರೆ ಇನ್ನಷ್ಟು ಉತ್ಸಹ, ಆರೋಗ್ಯ ವೃದ್ಧಿಯಾಗಲಿದೆ. ಹಿಂದಿಗಿಂತ ಇಂದು ಪ್ರವಾಸೋದ್ಯಮದಲ್ಲಿ ಸಾಕಷ್ಟು ಬದಲಾಗಿದೆ. ಯಾರೇ ಆಗಲಿ ತಿಂಗಳಲ್ಲಿ ಕೆಲವು ದಿನ ಪ್ರವಾಸ ಮಾಡುವುದರಿಂದ ಮನಸ್ಸಿನ ಶಾಂತಿಯನ್ನು ತಂದುಕೊಳ್ಳಬಹುದು ಎಂದರು.
ಮಲೆನಾಡು ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ. ಎ.ಜೆ. ಕೃಷ್ಣಯ್ಯ ಮಾತನಾಡಿ, ಈ ಸಂಸ್ಥೆಯ ಆಯವ್ಯಯ ಲೆಕ್ಕಚಾರವನ್ನು ಅವಲೋಕನ ಮಾಡುವ ಕಾರ್ಯಕ್ರಮ ಇದಾಗಿದೆ. ಈ ಸಂಸ್ಥೆ ಜನಪರ ಕೆಲಸ, ಸಮಾಜದ ಕಳಕಳಿ ಇಟ್ಟುಕೊಂಡು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದೆ. ಸಂಘದ ಅಧ್ಯಕ್ಷರಾಗಿರುವ ಪಾರ್ಶ್ವನಾಥ್ ಅವರು ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸಂಸ್ಥೆಯ ಎಲ್ಲ ನಿರ್ದೇಶಕರು ಸೇರಿ ಅಭಿವೃದ್ಧಿಗೆ ಕೈಜೋಡಿಸಿ, ಉತ್ತಮ ಕೆಲಸ ಮಾಡಲು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷರಾದ ಎಚ್.ಡಿ. ಪಾರ್ಶ್ವನಾಥ್ ಮಾತನಾಡಿ, ಸಂಘದ ಕಾರ್ಯಸೂಚಿಯನ್ನು ಓದುತ್ತಾ, 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಆಡಿಟ್ ಲೆಕ್ಕ ಪತ್ರ ಅಂಗೀಕರಿಸಿದರು.
ಇದೆ ವೇಳೆ ಸಂಘದ ಉಪಾಧ್ಯಕ್ಷ ಕೆ.ವಿ. ಗುರುಪ್ರಸಾದ್, ನಿರ್ದೇಶಕರಾದ ವಿನೋದ್ ಕುಮಾರ್, ಎಚ್.ಎಸ್. ನವೀನ್, ಎಸ್.ಬಿ. ಮಂಜುನಾಥ್ ಜೈನ್, ಹೇಮಪ್ರಕಾಶ್, ಎಸ್.ಕೆ. ವೇಣುಗೋಪಾಲ್, ಎಚ್.ಆರ್. ಚಿದಾನಂದ್, ಬಿ. ನಾರಾಯಣ ಪ್ರಕಾಶ್, ನಳಿನಾ, ಕೆ. ಶಿಲ್ಪಾ, ಎಸ್.ಕೆ. ಅನುಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.