ಚಿತ್ರದುರ್ಗ: ಆರ‌್ಯವೈಶ್ಯ ಸಂಘ ಹಾಗೂ ಆರ‌್ಯ ವೈಶ್ಯ ಸಹ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ವಿಶ್ವ ವಾಸವಿ ಜಗದ್ಗುರು ಮಹಾ ಸಂಸ್ಥಾ ನಂ, ವಾಸವಿ ಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣದ 2ನೇ ವಾರ್ಷಿಕೋತ್ಸವ ಅಂಗವಾಗಿ ನಗ ರದಲ್ಲಿ ಏರ್ಪಡಿಸಿರುವ ಭಕ್ತಿ ಸಿಂಚನ 2 ದಿನಗಳ ಧಾರ್ಮಿಕ-ಸಂವಾದ ಕಾರ‌್ಯಕ್ರಮಗಳ ಅಂಗವಾಗಿ ಶನಿವಾರ ಶ್ರೀಗಳ ಪುರ ಪ್ರವೇಶ, ಶೋಭಾ ಯಾತ್ರೆ ಹಾಗೂ ಬೈಕ್‌ರ‌್ಯಾಲಿ ಜರುಗಿತು.
ಚಳ್ಳಕೆರೆ ಟೋಲ್‌ಗೇಟ್ ಬಳಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್‌ಕುಮಾರ್ ಬೈಕ್‌ರ‌್ಯಾಲಿ ಉದ್ಘಾಟಿಸಿದರು. ಶ್ರೀ ಕನ್ಯಕಾ ಪರ ಮೇಶ್ವರಿ ಉತ್ಸವ ಮೂರ್ತಿ ಹಾಗೂ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮಂಗಳವಾಧ್ಯಗಳೊಂದಿಗೆ ಶೋಭಾಯಾತ್ರೆ ಮೂ ಲಕ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯಕ್ಕೆ ಕರೆದೊಯ್ಯಲಾಯಿತು.
ವಾಸವಿ ಸರ್ಕಲ್‌ನಲ್ಲಿ ಮಹಿಳೆಯರು ಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ದೇವಾಲಯದಲ್ಲಿ ಗೋಪೂಜೆ,ವೇದಘೋಷ, ವಿವಿಧ ಹೋಮಗಳು ನಡೆಯಿತು. ವಿವಿಧ ಭಜನಾ ಮಂಡಳಿ ಸದಸ್ಯರು ಭಜನಾ ಕಾರ‌್ಯಕ್ರಮವನ್ನು ನಡೆಸಿಕೊಟ್ಟರು. ಸಮಾಜ ಪ್ರಮುಖ ರಾದ ಲಿಂಗಂ ಶ್ರೀನಿವಾಸ್,ಕೃಷ್ಣ,ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ,ಟಿ.ಬದ್ರಿನಾಥ್,ಪುಟ್ಟರಾಜು, ಕಾಂತರಾಜು,ಮಂಜುಪ್ರಸಾದ್, ಅವಿ ನಾಶ್,ಯಶಸ್ ಮತ್ತಿತರರು ಇದ್ದರು.