ಚಿತ್ರದುರ್ಗ: ನಗರದ ಹೊರವಲಯ ಸೀಬಾರದ ನಿಜಲಿಂಗಪ್ಪ ಸ್ಮಾರಕ ‘ಪುಣ್ಯಭೂಮಿ’ಗೆ ಶುಕ್ರವಾರ ಶ್ರೀ ಶೈಲ ಜಗದ್ಗುರು ಡಾ.ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭೇಟಿ ನೀಡಿದರು.
ದಾವಣಗೆರೆಯಿಂದ ಕಡೂರಿಗೆ ತೆರಳುವ ಮಾರ್ಗ ಮಧ್ಯೆ ಸೀಬಾರಕ್ಕೆ ಆಗಮಿಸಿದ ಶ್ರೀಗಳು, ರಾಷ್ಟ್ರ ನಾಯಕ ಎಸ್. ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ಪುಷ್ಪ ನಮನೊಂದಿಗೆ ಗೌರವ ಸಲ್ಲಿಸಿದರು. ಗ್ರಂಥಾಲಯ, ಮ್ಯೂಸಿಯಂ ಸಹಿತ ಸ್ಮಾರಕವನ್ನು ವೀಕ್ಷಿಸಿದ ಶ್ರೀಗಳನ್ನು ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಗೌರವ ಕಾರ್ಯದರ್ಶಿ, ಮಾಜಿ ಸಂಸದ ಎಚ್. ಹನುಮಂತಪ್ಪ ಅವರು ಗೌರವಿಸಿ ವಿವಿಧ ಗ್ರಂಥಗಳನ್ನು ಸಮರ್ಪಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕೆಇಬಿ ಷಣ್ಮುಖಪ್ಪ, ಗುತ್ತಿನಾಡು ಪ್ರಕಾಶ್, ಡಿ.ಟಿ. ಶಿವನಂಜಪ್ಪ, ಇ.ಎಸ್. ಜಯದೇವಮೂರ್ತಿ, ಲಕ್ಷ್ಮೀಸಾಗರದ ಜಿ.ಕೆ. ಕುಮಾರ್, ನಿರಂಜನ ದೇವರಮನೆ, ಬಸವರಾಜಶಾಸ್ತ್ರಿ, ವಿಶ್ವನಾಥ ಶಾಸ್ತ್ರಿ, ಕೆ.ಸಿ. ರುದ್ರೇಶ್, ಜಾಲಿಕಟ್ಟೆ ರುದ್ರಪ್ಪ, ಲೋಕೇಶ್,ಎಂ.ಜೆ. ರುದ್ರಮೂರ್ತಿ, ತವಂದಿರಾಜು, ಕೆ.ಸಿ. ಗುರು ಬಸವರಾಜು ಇತರರು ಇದ್ದರು.