ಕಡೂರು: ಪಟ್ಟಣದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶನೈಶ್ಚರ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ ದೇವರಿಗೆ 108 ಬಾರಿ ಗಂಗಾಜಲ ಅಭಿಷೇಕ, 7 ಗಂಟೆಗೆ ಪಂಚಾಮೃತಾಭಿಷೇಕ ಮತ್ತು ಬೆಳ್ಳಿಕವಚದ ವಿಶೇಷ ಅಲಂಕಾರ ನೆರವೇರಿಸಲಾಯಿತು. ಬಳಿಕ ಪುನೀತ್ ಕಶ್ಯಪ್ ನೇತೃತ್ವದ ತಂಡದಿಂದ ಶನಿ ಶಾಂತಿಹೋಮ ನೆರವೇರಿಸಲಾಯಿತು. ಶಾಸಕ ಕೆ.ಎಸ್.ಆನಂದ್ ಹಾಗೂ ಪುರಾಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್.ಚೇತನ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಗೋವಿಂದರಾಜು, ಶಶಿಕುಮಾರ್, ಮೋಹನ್, ಸಮಿತಿ ಪದಾಧಿಕಾರಿಗಳಾದ ಕೆ.ಬಿ.ಸೋಮೇಶ್, ಕೃಷ್ಣಮೂರ್ತಿ, ಮಲ್ಲಪ್ಪ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ನಿರಂಜನ್, ನಂಜುಂಡಸ್ವಾಮಿ, ಕೆ.ಜಿ.ಲೋಕೇಶ್ವರ್, ಎನ್.ಎಚ್.ಚಂದ್ರಪ್ಪ, ರಮೇಶ್, ಸುರೇಶ್, ಕರಿಬಡ್ಡೆ ರಾಜು, ಡಿಶ್ ಮಂಜುನಾಥ್, ಚಿನ್ನ ರಾಜು, ಕಾಂತರಾಜು, ವಿನಯ್ ಇತರರಿದ್ದರು.