ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಶ್ರೀ ಶಕುನ ರಂಗನಾಥ ಸ್ವಾಮಿ ಜಾತ್ಸೋತ್ಸವ ಸಂದರ್ಭದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ನಿಂದ ಪಾನಕ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. 
ಜಿಲ್ಲೆ

ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೆ ಅಂಗವಾಗಿ ಪಾನಕ, ಪ್ರಸಾದ ವಿತರಣೆ

ಚಿಕ್ಕಮಗಳೂರು: ಪುರಾಣ, ಐತಿಹಾಸಿಕ ಪ್ರಸಿದ್ಧ ಶ್ರೀಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಖರಾಯಪಟ್ಟಣ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಘಟಕದಿಂದ ಗುರುವಾರ ಭಕ್ತಾಧಿಗಳಿಗೆ ಪಾನಕ, ಪ್ರಸಾದ ವಿತರಿಸಿ, ಭಗವದ್ಗೀತಾ ಪುಸ್ತಕ ಹಂಚಲಾಯಿತು.

ಜಾತ್ರಾ ಮಹೋತ್ಸವು ಎರಡು ದಿನಗಳ ಹಿಂದೆ ಮೊಲ ಬಿಡುವ ಸೇವೆ, ಎಡ ಶ್ರೀಯವರ ಉತ್ಸವ ನಡೆಯುವ ಮೂಲಕ ಆರಂಭಗೊAಡಿತ್ತು. ಗುರುವಾರ ರಾತ್ರಿ ೯.೩೦ಕ್ಕೆ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಜ. ೧೭ರಂದು ಕೆಂಚರಾಯಸ್ವಾಮಿ ಸೇವೆ ಹಾಗೂ ೧೮ ರಂದು ಪರ್ಶೆ ಉತ್ಸವ ಸೇವೆಯ ಮುಖಾಂತರ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಈ ವೇಳೆ ಮಾತನಾಡಿದ ಬಜರಂಗದಳದ ಹೋಬಳಿ ಸಂಯೋಜಕ ಎಸ್.ಜಿ.ಸಂಜಯ್, ಐತಿಹಾಸಿಕ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೆಯ ಅಂಗವಾಗಿ ಕಳೆದ ಹನ್ನೇರಡು ವರ್ಷಗಳಿಂದ ಸಂಘಟನೆಯು ಪಾನಕ, ಪ್ರಸಾದ ವಿತರಣೆ ಸೇರಿದಂತೆ ಭಜನಾ ಕಾರ್ಯಕ್ರಮವನ್ನು ಭಕ್ತಾಧಿಗಳಿಗೆ ಏರ್ಪಡಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ಶ್ರೀ ಶಕುನ ರಂಗನಾಥಸ್ವಾಮಿ ದೇಗುಲಕ್ಕೆ ಸಖರಾಯಪಟ್ಟಣ ಹೋಬಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಅನೇಕ ತಲೆಮಾರುಗಳು ಪ್ರತಿವರ್ಷವು ಚಾಚುತಪ್ಪದೇ ಜಾತ್ರಾ ಮಹೋತ್ಸವ ಆರಂಭದಿAದ ಕೊನೆಯತನಕ ಪಾಲ್ಗೊಳ್ಳುತ್ತಾರೆ. ಜೊತೆಗೆ ಜಾತ್ರೆಯ ಸಂಪೂರ್ಣ ಗ್ರಾಮೀಣ ಸೊಗಡಿನಿಂದ ಕೂಡಿರುತ್ತದೆ ಎಂದು ಹೇಳಿದರು.

ಭಗವದ್ಗೀತಾ ಪುಸ್ತಕ ಹಂಚಿಕೆ ವಿತರಕ ಆರ್.ಆರ್.ಕೃಷ್ಣಮೂರ್ತಿ ಮಾತನಾಡಿ, ವೇದಗಳೇ ಭಾರತೀಯ ಜ್ಞಾನ ಸಂಪತ್ತಿನ ಮೂಲಗಳು. ಹೀಗಾಗಿ ಸಾರ್ವಜನಿಕರಲ್ಲಿ ಹಿಂದುತ್ವದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ದೇವಾಲಯದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಗವದ್ಗೀತಾ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿz್ದೆÃವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‌ನ ಹೋಬಳಿ ಉಪಾಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಖಜಾಂಚಿ ನಾಗಭೂಷಣ್, ಬಜರಂಗದಳ ಸಹ ಸಂಯೋಜಕರಾದ ದರ್ಶನ್‌ನಾಯ್ಕ್, ಇಂದು ಕುಮಾರ್, ಸುರಕ್ಷಾ ಪ್ರಮುಖ್ ನಿತಿನ್ ಕುಮಾರ್, ಸದಸ್ಯರಾದ ಯೋಗೀಶ್, ಲೋಕೇಶ್, ದರ್ಶನ್‌ಗೌಡ, ಮುಖಂಡರಾದ ಯೋಗೇಂದ್ರಗೌಡ, ಮಿಥುನ್‌ಗೌಡ, ಶಿವಮೂರ್ತಿ, ಎಚ್.ಪಿ.ಲೋಕೇಶ್ ಮತ್ತಿತರರಿದ್ದರು.