ಹುಮನಾಬಾದ್ ತಾಲೂಕಿನ ಹುಡಗಿಯ ಹಿರೇಮಠದಲ್ಲಿ ಗುರುವಾರ ಆಯೋಜಿಸಿದ್ದ ಮಠದ ಪೀಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರ ಜನ್ಮವರ್ಧಂತಿ ಮಹೋತ್ಸವವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಶ್ರೀ ವೀರುಪಾಕ್ಷ ಶಿವಾಚಾರ್ಯರುಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಹಾವಗೀರಾವ ಶಿವಾಚಾರ್ಯ, ಶ್ರೀ ಸಿದ್ಧಲಿಂಗ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಮಾಜಿ ಶಾಸಕ ಸುಭಾಷ ಕಲ್ಲೂರ, ಸೋಮನಾಥ ಪಾಟೀಲï, ಕಂಟೆಪ್ಪ ದಾನಾ ಇತರರಿದ್ದರು. 
ಜಿಲ್ಲೆ

ಶ್ರೀ ವೀರುಪಾಕ್ಷ ಶಿವಾಚಾರ್ಯರ ಕಾರ್ಯ ಅವಿಸ್ಮರಣೀಯ

ಹುಮನಾಬಾದ್: ಧರ್ಮ ಪ್ರಚಾರದ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತ ಭಕ್ತರಿಗೆ ಧರ್ಮೋಪದೇಶ ನೀಡುತ್ತಿರುವ ಸರಳ ಸಜ್ಜನಿಕೆ ವ್ಯಕ್ತಿತ್ವದ ಜಿ¯್ಲೆಯ ಅತ್ಯಂತ ಹಿರಿಯ ಸ್ವಾಮಿಗಳಾಗಿರುವ ತಾಲೂಕಿನ ಹುಡುಗಿ ಗ್ರಾಮದ ಹಿರೇಮಠದ ಪೀಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಹುಡುಗಿ ಗ್ರಾಮದ ಹಿರೇಮಠದಲ್ಲಿ ಭಕ್ತ ವೃಂದ, ಶ್ರೀ ಕರಿಬಸವೇಶ್ವರ ಶಾಲೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಠದ ಪಿಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರ ೯೬ನೇ ಜನ್ಮ ವರ್ಧಂತಿ ಮಹೋತ್ಸವ ಮತ್ತು ಶ್ರೀ ಕರಿಬಸವೇಶ್ವರ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ೯೬ ವರ್ಷಗಳಾದರೂ ಸಹ ಶ್ರೀಗಳು ಈ ಭಾಗದ ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಜತಗೆ ಬಡ ಮಕ್ಕಳಿಗೆ ಶೈಕ್ಷಣಿಕ ಸೇವೆ ಒದಗಿಸುತ್ತಿದ್ದಾರೆ. ಇವರ ಸೇವೆ ಸಮಾಜಕ್ಕೆ ಅತ್ಯಂತ ಮಹತ್ವದಾಗಿದೆ. ಹೀಗೆ ಸೇವೆ ಮುಂದುವರೆಸಿ ಜನರಲ್ಲಿ ಧರ್ಮದ ಅರಿವು ಮೂಡಿಸುವ ಮೂಲಕ ಭಕ್ತರಿಗೆ ಇನ್ನೂ ಹೆಚ್ಚಿನ ಮಾರ್ಗದರ್ಶನ ದೊರೆಯಲಿ ಎಂದರು.

ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲï ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಹಿರಿಯರಾಗಿರುವ ಸರಳ ಸಜ್ಜನಿಕೆಯ ಪ್ರತಿರೂಪವಾಗಿರುವ ಶ್ರೀಗಳ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ತಂದೆ ದಿ.ಬಸವರಾಜ ಪಾಟೀಲ್ ಹುಮನಾಬಾದ್ ಅವರು ಸಹ ಶ್ರೀಗಳ ಅನುಯಾಯಿಗಳಾಗಿದ್ದು, ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದರು. ಇಂದು ಎಲ್ಲರೂ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ತಡೋಳದ ಶ್ರೀ ರಾಜೇಶ್ವರ ಶಿವಾಚಾರ್ಯರು, ಹಲಬರ್ಗದ ಶ್ರೀ ಹಾವಗಿಲಿಂಗ ಶಿವಾಚಾರ್ಯರು, ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಬಿಟಿವಿಪಿ ಕೇಂದ್ರ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ನಿರಂತರ ಹಾಗೂ ಇಳಿವಯಸ್ಸಿನಲ್ಲಿ ಶ್ರೀಗಳ ಕಾರ್ಯ ಅಮೋಘವಾಗಿದೆ ಕೊಂಡಾಡಿದರು.

ಸದಾಲಪುರದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಪ್ರಮುಖರಾದ ಡಾ.ನಾಗನಾಥ ಹುಲಸೂರೆ, ಡಾ.ವಿಶ್ವ ಸೈನೀರ್, ನ್ಯಾಯವಾದಿಗಳಾದ ಉದಯಕುಮಾರ ಚೀಲವಂತ, ಕಿರಣ ಹಣಮಶೆಟ್ಟಿ, ಚಂದ್ರಕಾಂತ ಅಳ್ಳೆ, ಶಿವಾನಂದ ಉಳಗಡ್ಡೆ, ಬಂಡೆಪ್ಪ ಖಂಡಾಳೆ, ಮಲ್ಲಿಕಾರ್ಜುನ ಪಾಟೀಲ್, ಶಿವಕುಮಾರ ಪೆದ್ದಿ, ಚಂದ್ರಕಲಾ ಪಾಟೀಲ್, ಶರಣಯ್ಯ ವಿಭೂತಿ, ವಿವಿಧಡೆಯಿಂದ ಆಗಮಿಸಿದ ಭಕ್ತರು, ಗ್ರಾಮಸ್ಥರು ಇದ್ದರು.

ದಯಾನಂದ ಸಿಂಧನಕೇರಾ ಸ್ವಾಗತಿಸಿದರು. ಶಾಲೆಯ ಪ್ರತಿಭಾವಂತ ಸಾಧಕ ಮಕ್ಕಳನ್ನು ಶ್ರೀಗಳು ಸನ್ಮಾನಿಸಿದರು.

ಶಿಕ್ಷಣ ಜತೆಗೆ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ: ಪ್ರತಿ ಭಕ್ತರು ಧರ್ಮದ ತಳಹದಿಯ ಮೇಲೆ ನಡೆಯುವ ಜತಗೆ ಮಕ್ಕಳಲ್ಲೂ ಧರ್ಮ ಜಾಗೃತಿ ಮೂಡಿಸಿ ಸಂಸ್ಕಾರವಂತರಾಗಿ ಮಾಡಬೇಕೆಂದು ಹುಡುಗಿ ಹಿರೇಮಠದ ಪೀಠಾಧಿಪತಿ ಶ್ರೀ ವೀರುಪಾಕ್ಷ ಶಿವಾಚಾರ್ಯರು ನುಡಿದರು. ಭಕ್ತರಿಂದ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಗುಣಮಟ್ಟದ ಶಿಕ್ಷಣ ಜತೆಗೆ ಮಕ್ಕಳಲ್ಲಿ ದೇಶಾಭಿಮಾನ, ಧರ್ಮ, ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು. ನಾಗಯ್ಯ ಸ್ವಾಮಿ ಹಿರೇಮಠ ಅವರಿಗೆ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಬರುವ ಬಸವ ಜಯಂತಿ ಸಮಯದಲ್ಲಿ ನಿಮ್ಮೆಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಪಟ್ಟಾಭಿಷೇಕ ನೆರವೇರಿಸಲಾಗುವುದು ಎಂದು ಘೋಷಿಸಿ, ನಾಗಯ್ಯಸ್ವಾಮಿ ಅವರನ್ನು ಸನ್ಮಾನಿಸಿ ಆರ್ಶೀವದಿಸಿದರು.